1801 ಅಡಿ ತಲುಪಿದ ಲಿಮಗನಮಕ್ಕಿ ಜಲಾಶಯ, ಕೆಪಿಸಿಎಲ್ ನಿಂದ ಮೊದಲ ವಾರ್ನಿಂಗ್

ಲಿಂಗನಮಕ್ಕಿ ಜಲಾಶಯ

ಸುದ್ದಿಲೈವ್/ಸಾಗರ


ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1801 ಅಡಿ ತಲುಪಿದ್ದು ಶೇ.65 ರಷ್ಟು ನೀರು ಸಂಗ್ರಹವಾಗಿದೆ. ನೀರು ಸಂಗ್ರಹವಾದ ಬೆನ್ನಲೇ ಮೊದಲ ಎಚ್ಚರಿಕೆಯನ್ನ ಕೆಪಿಸಿಎಲ್ (ಕರ್ನಾಟಕ ಪವರ್ ಕಾರ್ಪರೇಷನ್ ಲಿಮಿಟೆಡ್) ನದಿ ಪಾತ್ರದ ಜನರಿಗೆ ಮುನ್ನಚ್ಚರಿಕೆ ನೀಡಿದೆ.


ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ಸ್ ಗಿಂತಲೂ ಹೆಚ್ಚಿನ ನೀರು ಹರಿದು ಬರುತ್ತಿದೆ. 1819 ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ 1801 ಅಡಿ ಭರ್ತಿಯಾಗಿದೆ 18 ಅಡಿ ಭರ್ತಿಗೆ ಬಾಕಿ ಉಳಿದಿದೆ. 17 ಅಡಿ ಭರ್ತಿಗೆ ಸಮಯ ಹಿಡಿಯಬಹುದು. ಆದರೆ ಮೂರು ಹಂತದಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಈಗ ಇದು ಮೊದಲ ಎಚ್ಚರಿಕೆಯಾಗಿದೆ. 


ಅಣೇಕಟ್ಟು ಸುರಕ್ಷತೆ ದೃಷ್ಟಿಯಿಂದ  ಯಾವುದೇ ಸಮಯದಲ್ಲೂ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಗಲ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಮೊದಲ ಮುನ್ನೆಚ್ಚರಿಕೆಯ ಸೂಚನೆ ನೀಡಿದ್ದಾರೆ.


ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ.


ಇದನ್ನೂ ಓದಿ-https://www.suddilive.in/2024/07/blog-post_743.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು