ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-2, ಮಂಡ್ಲಿಯ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸೀಗೆಹಟ್ಟಿ, ರವಿವರ್ಮಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ಸರ್ಕಲ್, ಕೃಷಿ ಕಚೇರಿ, ಮಾಕಮ್ಮಬೀದಿ, ಕೆರೆದುರ್ಗಮ್ಮನಕೇರಿ, ಪುಟ್ಟನಂಜಪ್ಪ ಕೇರಿ, ಆಜಾದ್ ನಗರ, ಕಲಾರ್ ಪೇಟೆ, ಸಿದ್ದಯ್ಯ ರಸ್ತ, ಇಮಾಮ್ ಬಡಾ, ಮುರಾದ್‍ನಗರ, ಕ್ರೌನ್ ಪ್ಯಾಲೇಸ್ ಶಾದಿಮಹಲ್,
ತಾಹಾ ಶಾದಿಮಹಲ್, ಮಂಡಕ್ಕಿಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.18 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ-https://suddilive.in/archives/19462
Tags:
ನಗರ ಸುದ್ದಿಗಳು