ಮಳೆಯಿಂದ ಎರಡು ಸಾವು, 150 ಶಾಲೆ ಕಟ್ಟಡಗಳು ಹಾನಿ-ಮಧು ಬಂಗಾರಪ್ಪ



ಸುದ್ದಿಲೈವ್/ಸಾಗರ

ಸಾಗರ ತಾಲೂಕಿನಲ್ಲಿ ಮಳೆಯಿಂದಾಗಿ ಆದ ಅನಾಹುತಗಳನ್ನ ವೀಕ್ಷಿಸಿದ ಸಚಿವರು ಮಾಧ್ಯಮಗಳಿಗೆ ಮಾತನಾಡಿದರು.


ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ನನ್ನ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದೆ. ಜಿಲ್ಲೆಯ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನ, ಮಳೆ ಬೀಳುತ್ತಿರುವುದರಿಂದ ಜನರು ಹುಷಾರಾಗಿ ಇರುವಂತೆ ಮನವಿ ಮಾಡಿಕೊಂಡರು.

ಅನಧಿಕೃತ ಮನೆಗಳಿಗೆ ಪರಿಹಾರಕ್ಕೆ ಕ್ರಮ

ಡಿಸಿ ಸಿಇಓ ತಹಶೀಲ್ದಾರ್ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಹೇಳಿರುವೆ ಎಂದ ಸಚಿವರು ಕೆಲ ಮನೆಗಳು ಅನಧಿಕೃತ ಕಟ್ಟಿದ್ದಾರೆ. ಇದರ ಬಗ್ಗೆ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವರ ಜೊತೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಚರ್ಚೆ ಆಗಬೇಕಿದೆ. ವರದಾ ನದಿಯಿಂದ ಸಾಕಷ್ಟು ಹಾನಿಯಾಗಿದೆ. ಬೆಳೆ ಎಲ್ಲಾ ನೀರು ಪಾಲಾಗಿವೆ ಎಂದರು. 


ಮಳೆ ಆಗಬೇಕು, ಕಳೆದ ಬಾರಿ ಮಳೆ ಕೊರತೆ ಎದುರಾಗಿತ್ತು. ಮಳೆ ಎದುರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸನ್ನದ್ಧ ರಾಗಿದ್ದಾರೆ. ಎಲ್ಲಾ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಮಳೆಯಿಂದ ಮತ್ತಷ್ಟು ಅನಾವುತ ಸಂಭವಿಸುವ ಸಾಧ್ಯತೆ ಇದೆ. ಜನ ಸ್ವಲ್ಪ ಎಚ್ಚರಿಕೆ ಯಿಂದ ಇರಬೇಕಾಗುತ್ತದೆ. ಮನೆ ಬಿದ್ದವರಿಗೆ ಹೊಸ ಮನೆ ಕಟ್ಟಿಸಿಕೊಡುವ ಕೆಲಸ ಮಾಡ್ತೇವೆ. ಈಗ 1 ಲಕ್ಷದ 20 ಸಾವಿರ ಹಣ ನೀಡ್ತೇವೆ. ಮನೆ ಕಳೆದುಕೊಂಡ ಜನರ ನೋವಿಗೆ ಸರ್ಕಾರ ನಿಲ್ಲುತ್ತದೆ. 

ಸರ್ಕಾರಿ ಹಣದಲ್ಲಿ ಕಳಪೆ ಕಾಮಗಾರಿ ಆಗಿದ್ದರೆ ಕಠಿಣ ಕ್ರಮ

ಮಳೆ ಹೆಚ್ಚಾದಾಗ ಗುಡ್ಡ‌ ಕುಸಿತ ಪ್ರಕರಣ ಹೆಚ್ಚಾಗುತ್ತದೆ. ಈಗಾಗಲೇ ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಇಬ್ವರು ಸಾವನಪ್ಪಿದ್ದಾರೆ. ಅವರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗುವುದು. ಸರ್ಕಾರದ ಹಣದಲ್ಲಿ ಕಳಪೆ ಕಾಮಗಾರಿ ಆಗಿದ್ರೆ, ಈ ಬಗ್ಗೆ ಸಿಎಂ ಹೇಳಿದ್ದಾರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.


150 ಶಾಲೆಗಳು ಹಾನಿ 


ಜಿಲ್ಲೆಯಲ್ಲಿ 150 ಶಾಲಾ ಕಟ್ಟಡಗಳು ಮಳೆಯಿಂದ ಹಾನಿಯಾದ್ರೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದ ನದಿಯ ಮೂಲದಿಂದ ಸೊರಬದ ವರೆಗೆ ಬರದಹಳ್ಳಿ ಹೊರತು ಪಡಿಸಿ 53 ಕೋಟಿಯಲ್ಲಿ ಬ್ಯಾರೇಜ್ ನಿರ್ಮಿಸಲು ಪ್ರಕ್ರಿಯೆ ಆರಂಭವಾಗಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close