ತುಂಗ ಜಲಾಶಯದ 14 ಗೇಟ್ ಒಪನ್


 ಸುದ್ದಿಲೈವ್/ಶಿವಮೊಗ್ಗ

ಭರ್ಜರಿ ಮಳೆಗೆ ಶಿವಮೊಗ್ಗದ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಬಿಆರ್ ಪಿ, ಗಾಜನೂರಿನ ತುಂಗ ಜಲಾಶಯ ಹಾಗೂ ಲಂಗನಮಕ್ಕಿ ಜಲಾಶಯಗಳಲ್ಲಿ ತಕ್ಕಮಟ್ಟಿಗೆ ನೀರು ಸಂಗ್ರಹವಾಗಿದೆ.

https://youtu.be/xw1s-eS41J4?si=KNJGEDPPfdZMORGD

ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ ಕೈಕೊಟ್ಟಿದೆ. 2356 ಮಿಮಿ‌ಮಳೆ ಬೀಳುವ ಶಿವಮೊಗ್ಗ ಜಿಲ್ಲೆಯಲ್ಲಿ 1500 ಮಿಮಿ ಮಳೆಯಾಗಿದೆ. ಕೇವಲ 70% ವಾಡಿಕೆ ಮಳೆ ಬಿದ್ದಿದೆ. ಶೇ.30% ಮಳೆ ಜೂನ್ ನಲ್ಲೇ ಕಂಡುಬಂದಿದೆ.

ಈಗ ಸಧ್ಯಕ್ಕೆ ತುಂಗನದಿಯಲ್ಲಿ 19 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು 14 ಗೇಟ್ ಗಳಿಂದ ಅಷ್ಟೇ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. 14 ಗೇಟ್ ಗಳನ್ನ‌ ಅರ್ಧ‌ ಅಡಿ ಎತ್ತರಿಸಿ 13013 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದರೆ. ಪಂಪ್ ಹೌಸ್ ನಿಂದ 6 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಭದ್ರಾದಲ್ಲಿ ಅಂತಹ‌ಒಳಹರಿವು ಕಂಡು ಬರುತ್ತಿಲ್ಲ. 5324 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಳೆದ ವರ್ಷ ಈ ದಿನಗಳಲ್ಲಿ 136.1 ಅಡಿಯಿದ್ದ ನೀರು ಕೆಳಮಟ್ಟದಿಂದ ಜಲಾಶಯ ಭರ್ತಿಯಾಗಬೇಕಿದೆ. ಸಧ್ಯಕ್ಕೆ 126.3 ಅಡಿ ನೀರು ಸಂಗ್ರಹವಾಗಿದೆ.

ಲಿಂಗನಮಕ್ಕಿಯಲ್ಲಿ ಕಳೆದ ವರ್ಷಕ್ಕಿಂತ 14 ಅಡಿ‌ನೀರು ಹೆಚ್ಚು‌ ಸಂಗ್ರಹವಾಗಿದೆ. ಇಲ್ಲೂ ಸಹ‌19950 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1755 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನಕ್ಕೆ 1741 ಅಡಿ ನೀರು ಸಂಗ್ರಹವಾಗಿದೆ. 2055 ಕ್ಯೂಸೆಕ್ ನೀರು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close