ಜು.13 ರಿಂದ ಶಿವಮೊಗ್ಗ ದಿಂದ ಚೆನ್ನೈಗೆ ಹೊಸ ರೈಲು

ಸುದ್ದಿಲೈವ್/ಶಿವಮೊಗ್ಗ

ಆಂದ್ರದ ಪುಟ್ಪರ್ಥಿಯಿಂದ ತಮಿಳು ನಾಡಿನ ಚೆನ್ನೆಗೆ ಸಂಚರಿಸುತ್ತಿದ್ದ  ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ರೈಲು ಇನ್ನು ಮುಂದೆ ಶಿವಮೊಗ್ಗ ಮತ್ತು ಚೆನ್ನೈ ನಡುವೆ ಸಂಚರಿಸಲಿದೆ.

12691 ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ರೈಲು ಚೆನ್ನೈನಿಂದ ಪ್ರತಿ ಶುಕ್ರವಾರ ರಾತ್ರಿ 11.30 ಕ್ಕೆ ಹೊರಟು ಮರುದಿನ‌ ಅಂದರೆ ಶನಿವಾರ ಮಧ್ಯಾಹ್ನ 12-20 ಕ್ಕೆ ಶಿವಮೊಗ್ಗ ತಲುಪಲಿದೆ. ಈ ರೈಲು ಅರಕ್ಕೋಣಂ, ಶೋಲಿಂಗೂರ್, ಕಾಟ್ಪಾಡಿ,

ಜೋಲಾರ್ ಪಟ್ಟಿ ಜಂಕ್ಷನ್, ಬಂಗಾರಪೇಟ್ ಕೃಷ್ಣರಾಜ ಪುರಂ ಮೇಲೆ  ಬೆಂಗಳೂರಿಗೆ ಶನಿವಾರ ಬೆಳಗ್ಗಿನ ಜಾವ 5-20 ಕ್ಕೆ ತಲುಪಲಿದ್ದು, 6 ಗಂಟೆಗೆ ಬೆಂಗಳೂರು ಬಿಡಲಿದ್ದು, ತುಮಕೂರು, ತಿಪಟೂರು, ಅರಸೀಕೆರೆ,

ಬೀರೂರು, ಕಡೂರು, ತರೀಕೆರೆ, ಭದ್ರಾವತಿ ಮೂಲಕ ಶಿವಮೊಗ್ಗ ಟೌನ್ ನ್ನ ಶನಿವಾರ ಮಧ್ಯಾಹ್ನ 12-20 ಕ್ಕೆ ಬಂದು ತಲುಪಲಿದೆ. ಶನಿವಾರ ಸಂಜೆ 7-15 ಕ್ಕೆ ಶಿವಮೊಗ್ಗ ಬಿಡುವ ಇದೇ ರೈಲು ಅಂದು ರಾತ್ರಿ 10-20 ಕ್ಕೆ ಬೆಂಗಳೂರು ತಲುಪಲಿದೆ.

ಶನಿವಾರ ರಾತ್ರಿ 11 ಗಂಟೆಗೆ ಬಿಡಲಿದ್ದು, ಕೃಷ್ಣರಾಜಪುರ, ಬಂಗಾರಪೇಟೆ, ಕುಪ್ಪಂ, ಜೋಲಾರ್ ಪಟ್ಟಿ ಜಂಕ್ಷನ್, ಕಾಡ್ಪಾಡಿ, ಶೋಲಿಂಗೂರ್, ಅರಕ್ಕೋಣಂ, ಪೆರಂಬೂರ್ ಮೂಲಕ ಚೆನ್ನೈ ಎಂಜಿಆರ್ ರೈಲ್ವೆ ನಿಲ್ದಾಣವನ್ನ ಭಾನುವಾರ ಬೆಳಗ್ಗಿನ ಜಾವ 4-55‌ಕ್ಕೆ ತಲುಪಲಿದೆ.

ಈ ರೈಲಿಗೆ 22 ಕೋಚುಗಳಿದ್ದು, ಒಂದು IAC  ಕೋಚ್, ಎರಡು 2ಟೈರ್ ಎಸಿ, ಆರು ಎಸಿ  3 ಟೈರ್, 6 ಸ್ಲೀಪರ್, ಎರಡು ಸೆಕೆಂಡ್ ಸಿಟ್ಟಿಂಗ್ ಕೋಚ್, ಒಂದು SLR ಮತ್ತು ಒಂದು ಪವರ್ ಕಾರ್ ಸೇರಿರುತ್ತದೆ ಉಳಿದ ಮೂರು ಕೋಚು ಜನರಲ್ ಕೋಚ್ ಆಗಿವೆ.

ಜು.13 ರಂದು ಸಂಜೆ 5 ಗಂಟೆಗೆ ಶಿವಮೊಗ್ಗ‌ರೈಲು ನಿಲ್ದಾಣದಲ್ಲಿ  ಸಂಸದ ರಾಘವೇಂದ್ರ 12692  ಚೆನ್ನೈಗೆ ತೆರಳಲಿರುವ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ-https://suddilive.in/archives/19046

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close