ಜುಲೈ.12 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳ ಮುಂದೆ ಎಬಿವಿಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶೈಕ್ಷಣಿಕ ಸಮಸ್ಯೆಗಳನ್ನ ಸರಿಪಡಿಸುವಂತೆ ಆಗ್ರಹಿಸಿ ಜುಲೈ.12 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಟಕ ದಕ್ಷಿಣ ಪ್ರಾಂತ ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರವೀಣ್ ರಾಜ್ಯಾದ್ಯಂತ ಪ್ರತಿಭಟನೆಗೆ ಸಂಘಟನೆ ತೀರ್ಮಾನಿಸಿದೆ. ಅದರಂತೆ ಪ್ರತಿಭಟನೆಯಲ್ಲಿ ಪ್ರಮುಖ ಬೇಡಿಗಳಾದ ಬೇಡಿಕೆ  ಬಸ್ ಪಾಸ್ ಮತ್ತು ಬಸ್ ಗಳ ಸಮಸ್ಯೆ ಸರಿಪಡಿಸಬೇಕು. ಬಸ್ ಪಾಸ್ ವಿತರಣೆಯನ್ನ ವಿಸ್ತರಿಸಬೇಕು. ಬಸ್ ಗಳ ಓಡಾಟ ಹೆಚ್ಚಿಸಬೇಕು. ಸಮಯಕ್ಕೆ ಸರಿಯಾಗಿ ಬಸ್ ಗಳನ್ನ ಒದಗಿಸುವ ವ್ಯವಸ್ಥೆ ಬೇಕಿದೆ ಎಂದು ಆಗ್ರಹಿಸಿದರು.

ಹಾಸ್ಟೆಲ್ ಪ್ರವೇಶಾಥಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವನ್ನ ವಿರೋಧಿಸಿರುವ ಸಂಘಟನೆ ವಿದ್ಯಾರ್ಥಿ ವೇತನವನ್ನ ನೀಡದ ಸರ್ಕಾರದ ವಿರುದ್ಧ ಕೆಂಡಕಾರಿದೆ. ಜೂನ್ ತಿಂಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾದರೂ ಸೆಪ್ಟಂಬರ್ ವರೆಗೂ ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುತ್ತಿಲ್ಲ. ಮೂರು ತಿಂಗಳು ವಿದ್ಯಾರ್ಥಿಗಳು ಎಲ್ಲಿ ಉಳಿದುಕೊಙಡು ಶಿಕ್ಷಣ ಪಡೆಯಬೇಕು ಎಂದು ಪ್ರಶ್ನಿಸಿದರು.

ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನ ನಂಬಿ ಶಿಕ್ಷಣವನ್ನ ಪಡೆಯುತ್ತಾರೆ. ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿ ವೇತನ ಸಹಕಾರಿಯಾಗಲಿದೆ. ವಿದ್ಯಾಸಿರಿಯ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗಿಲ್ಲ. ರೈತ ವಿದ್ಯಾನಿಧಿಯನ್ನ ರದ್ಧುಗೊಳಿಸಿ, ಇನ್ನುಳಿದ ವಿದ್ಯಾರ್ಥಿ ವೇತನ ಸರಿಯಾಗಿ ಜಮೆ ಮಾಡದೆ ಇರುವ ರಾಜ್ಯಸರ್ಕಾರದ ವಿರುದ್ಧ ಸಂಘಟನೆ ಪ್ರತಿಭಟನೆಗೆ ತೀರ್ಮಾನಿಸಿದೆ ಎಂದರು.

ಏಕರೂಪ ವೇಳಾಪಟ್ಟಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನ ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಏಕರೂಪ ವೇಳಾಪಟ್ಟಿಯನ್ನ ಸಮರ್ಪಕವಾಗಿ ಜಾರಿಗೆ ಮಾಡುವಂತೆ ಎಬಿವಿಪಿ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/18906

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು