ಸುದ್ದಿಲೈವ್/ಸಾಗರ
ಇಲ್ಲಿನ ಕುಗ್ವೆ ಗ್ರಾಮದಲ್ಲಿ ಹರಿಯುತ್ತಿರುವ ಹೊಳೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನದಲ್ಲಿದ್ದವರನ್ನ 112 ಪೋಲೀಸರು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
26 ವರ್ಷದ ಅಣಲೇಕೊಪ್ಪದ ವಾಸಿ,ಕೌಟುಂಬಿಕ ಕಾರಣದಿಂದ ತನ್ನ 13 ವರ್ಷದ ಮಗಳು ಹಾಗೂ 4 ವರ್ಷದ ಮಗನೊಂದಿಗೆ ಕುಗ್ವೆ ಸಮೀಪದ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರು. ಈ ಹಿನ್ನಲೆಯಲ್ಲಿ ಬಂದಿದ್ದರು ಎನ್ನಲಾಗಿದೆ. ಇದಕ್ಕೂ ಮೊದಲು ಮಹಿಳೆ ತನ್ನ ಸ್ಕೂಟಿಯಲ್ಲಿ ಮೊಬೈಲ್ ಹಾಗೂ ಚಪ್ಪಲಿಯನ್ನು ಹೊಳೆ ಬದಿಯಲ್ಲಿಟ್ಟು ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ಇದನ್ನು ಗಮನಿಸಿದ ವಾಹನ ಸವಾರ ಮಹಿಳೆಯನ್ನು ಸಮಧಾನ ಪಡಿಸಿ,ಬುದ್ದಿ ಹೇಳಿ ಕಳುಹಿಸಿದ್ದಾರೆ. ಇದ್ಯಾವುದನ್ನು ಕೇಳುವ ಸ್ಥಿತಿಯಲ್ಲಿಲ್ಲದ ಮಹಿಳೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ,ವಾಹನ ಸವಾರ 112 ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ದೂರು ಸ್ವೀಕರಿಸಿಕೊಂಡು 112 ವಾಹನದ ಅಧಿಕಾರಿ ಹೆಡ್ ಕಾನ್ಸ್‌ಟೇಬಲ್ ಶಿವರುದ್ರಯ್ಯ ಹಾಗೂ ಚಾಲಕ ಶಿವಾನಂದ್ ಸ್ಥಳಕ್ಕಾಗಮಿಸಿದ್ದಾರೆ. ಈ ಸಂಧರ್ಭದಲ್ಲಿ ಮಹಿಳೆ ಹಾಗೂ ಮಗು ನೀರಿಗೆ ಇಳಿದಿದ್ದರು.
ಪೋಲೀಸರು ಮಹಿಳೆಯನ್ನು ರಕ್ಷಿಸಿ,ಪೋಲೀಸ್ ವಾಹನದಲ್ಲೇ ಪೇಟೆ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ. 112 ಪೋಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ಮೂವರ ಜೀವ ಉಳಿದಂತಾಗಿದೆ.
ಇದನ್ನೂ ಓದಿ-https://www.suddilive.in/2024/07/6_22.html