ಜು. 10 ರಂದು ವಿದ್ಯುತ್ ವ್ಯತ್ಯಯ-ಸಹಕರಿಸಲು ಮನವಿ

ಸುದ್ದಿಲೈವ್/ಶಿವಮೊಗ್ಗ

ಆಲ್ಕೋಳ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಎಎಫ್-12ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆಲ್ಕೊಳ ನಂದಿನಿ ಬಡಾವಣೆ, ವಿಕಾಸ ಶಾಲೆಯ ಹತ್ತಿರ, ಕನಕ ಲೇಔಟ್, ಸಿದ್ಧಗಂಗಾ ಬಡಾವಣೆ, ಜೆ.ಹೆಚ್.ಪಟೇಲ್ ಬಡಾವಣೆ, ಎ ಹಿಂದ ಎಫ್ ಬ್ಲಾಕ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿಕೊಪ್ಪ, ಆದರ್ಶನಗರ, ಭೋವಿ ಕಾಲೋನಿ,

ವಿಜಯಲಕ್ಷ್ಮಿ ಲೇಔಟ್, ಸಹ್ಯಾದ್ರಿನಗರ, ಕೊಪ್ಪ, ಪಶುವೈದ್ಯಕೀಯ ಕಾಲೇಜ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜು. 10 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-https://suddilive.in/archives/18869

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close