ಕಾನೂನು ಬಾಹಿರವಾಗಿ ನೀಡಿರುವ 10,377 ಎಕರೆ ಭೂಮಿ ಮಂಜೂರು ರದ್ದುಪಡಿಸಲು ಗಿರೀಶ್ ಆಚಾರ್ ಡಿಸಿಗೆ ಮನವಿ

 


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕಿನ ತಹಶೀಲ್ದಾರ್ ಅವರಿಂದ ಕರ್ನಾಟಕ ವಿದ್ಯುತ್ ನಿಗಮ ಕಾರ್ಗಲ್ (ಜೋಗ)ಕ್ಕೆ 1984 ರಲ್ಲಿ ಕಾನೂನು ಬಾಹಿರವಾಗಿ ಜಮೀನು ನೀಡಿದ್ದು, ಇದರ ರದ್ದುಗೊಳಿಸಿ ಎಂದು ಜನಸಂಗ್ರಾಮ ಪರಿಷತ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


1980 ರಲ್ಲಿ ಅರಣ್ಯ ಸಂರಕ್ಷಣ ಕಾಯ್ದೆ ಜಾರಿಗೆ ಬಂದಿದೆ. ಕಾಯ್ದೆ ಪ್ರಕಾರ ಕೇಂದ್ರದ ಅನುಮತಿ ಪಡೆದು ಜಮೀನು ಮಂಜೂರು ಮಾಡಬೇಕಿದ್ದ ಉಪವಿಭಾಗಾಧಿಕಾರಿಗಳು 1984 ರಲ್ಲಿ ಸಾಗರ ಮತ್ತು ಹೊಸನಗರದ ವಿವಿಧ ಸರ್ವೇ ನಂಬರ್ ನಲ್ಲಿರುವ 10,377.17 ಎಕರೆ ಜಮೀನನ್ನ ಎರಡೂ ತಾಲೂಕಿನ ತಹಶೀಲ್ದಾರ್ ಗೆ ಕರ್ನಾಟಕ ವಿದ್ಯುತ್ ನಿಗಮಕ್ಕೆ ಮಂಜೂರು ಮಾಡಲು  ಆದೇಶಿಸಿದ್ದಾರೆ.


ಈ ಆದೇಶದಲ್ಲಿ ಮಾಡಬಾರದ ಅಪರಾಧ ವೆಸಗಿರುವುದಾಗಿ ಕಂಡುಬಂದಿದ್ದು, ಇದನ್ನ ಇಬ್ಬರು ತಹಶೀಲ್ದಾರುಗಳು ಕಾನೂನು ಬಾಹಿರ ಮಂಜೂರಾತಿ ಮಾಡಿದ ಪರಿಣಾಮ ಕೆಲದುಷ್ಟ ಮನುಷ್ಯರು ಇದನ್ನ ಕಬಳಿಸಿಕೊಂಡು ಶುಂಠಿ, ಜೋಳ, ಅಡಿಕೆ ಬೆಳೆ  ಮಾಡಿರುವುದು ಕಂಡು ಬಂದಿದೆ.


ಸಾಗರ, ಕಾರ್ಗಲ್, ಕಾರ್ಗಲ್ ನ ವನ್ಯಜೀವಿ ವಿಭಾಗ, ಹೊಸನಗರ ಮತ್ತು ನಗರ ಹೋಬಳಿಗಳಲ್ಲಿ ಒಟ್ಟು 10,377.17 ಎಕರೆ ಭೂಮಿಯನ್ನ ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಭೂಮಿ ಕಬಳಕೆಯಿಂದಾಗಿ ವನ್ಯ ಜೀವಿಗಳ ಬದುಕು, ಸಂತಾನೋತ್ಪತ್ತಿಯ ಮೇಲೆ ದುಷ್ಪರಿಣಾಮ ಬೀರಿದೆ.


ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆಗಿನ ಮಂಜೂರಾತಿಯನ್ನ ರದ್ದುಗೊಳಿಸಿ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಆಚಾರ್ ಮನವಿಮಾಡಿಕೊಂಡಿದ್ದಾರೆ.

ಇದನ್ನೂ ಓದಿ-https://www.suddilive.in/2024/07/blog-post_820.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close