ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಜಿಲ್ಲಾಡಳಿತ ಮತ್ತು ಸೂಡಾ ಇವರ ಸಂಯುಕ್ತಾಶ್ರಯದಲ್ಲಿ ಸೋಮಿನಕೊಪ್ಪದ ನ್ಯಾಯಾಂಗ ಬಡಾವಣೆಯಲ್ಲಿ ಹಸರೀಕರಣ-ಸಸಿ ನೆಡುವ ಕಾರ್ಯಕ್ರಮದ ಅಡಿ ಒಂದುಸಾವಿರ ಸಸಿ ನಡುವ ಕಾರ್ಯಕ್ರಮ ನಡೆದಿದೆ.
ಈ ಬಗ್ಗೆ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಪತ್ರಕರ್ತರಲ್ಲಿ ಎರಡು ವರ್ಗವಿದೆ ಒಂದು ನಕಾರಾತ್ಮಕ ಮತ್ತೊಂದ ಸಕರಾತ್ಮಕ ಸುದ್ದಿ ಮಾಡುವವರಿದ್ದಾರೆ.
ಇವರೆಲ್ಲರೂ ಸುದ್ದಿ ಮಾಡುವ ಮೂಲಕ ನೊಂದವರ ಪರವಿದ್ದಾರೆ. ನಾನು ಅಧ್ಯಕ್ಷ ನಾಗಿ ಬಂದ ನಂತರ ಐದು ಸಾವಿರ ನಿವೇಶನ ಮಾಡುವ ಗುರಿ ಹೊಂದಿದ್ದೆ. ಆದರೆ ರೈತರಿಗೆ ಮಾರುಕಟ್ಟೆಯ ದರದಲ್ಲಿಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ನಿವೇಶನ ಮಾಡುವುದೇ ಕಷ್ಟವಾಗಿದೆ.
ಗೋಪಿಶೆಟ್ಟಿಕೊಪ್ಪದಲ್ಲಿ ಡಿನೋಟಿಫೈ ಮಾಡುವ ಹುನ್ಬಾರ ನಡೆದಿದೆ. ಅದನ್ನ ಸೂಡ ತಡೆಹಿಡಿದು ಸರ್ಕಸರಕ್ಕೆಡಿನೋಟಿ ಫೈ ಮಾಡದಂತೆ ಪತ್ರವರೆಯಾಗಿದೆ. ಸೂಡ ನಿವೇಶನ ಹಂಚಿಕೆಯಲ್ಲಿಯೇ ಪತ್ರಕರ್ತರಿಗೆ ಕಡಿಮೆ ಪರ್ಸೆಂಟೇಜ್ ನಲ್ಲಿ ಹಂಚಲಾಗುವುದು ಎಂದರು.
ಊರುಗಡೂರಿನ 8-10 ದಿನಗಳಲ್ಲಿ ಮತ್ತೆ ನಿವೇಶನ ಹಂಚಲು ಯೋಚಿಸಲಾಗಿದೆ. ಇಲಗಲಿ ನಾಲ್ಕು ಎಕರೆ ಜಾಗದಲ್ಲಿ ನಿವೇಶನ ಹಂಚಲಾಗುತ್ತಿದೆ. ಸೋಮಿನಕೊಪ್ಪದಲ್ಲಿ ಎರಡು ಎಕರೆ, ಮತ್ತೆರಡು ಅಪಾರ್ಟ್ ಮೆಂಟ್ ಕಟ್ಟಿಕೊಡಲು ಯೋಚಿಸಲಾಗಿದೆ. ಅಟೆಂಪ್ಟ್ ಮೇಲೆ ಸೀನಿಯಾರಿಟಿ ಹೆಚ್ಚಾಗಲಿದೆ ಅದರ ಮೇಲೆ ನಿವೇಶನ ಹಂಚಲಾಗುತ್ತಿದೆ ಎಂದರು.
ಎಲ್ಲಾ ಬಡಾವಣೆಗಳಲ್ಲಿ ಹಸರೀಕರಣವಿಲ್ಲವೆಂದರೆ ಅಪ್ರೂವಲ್ ನೀಡದಂತೆ ಒಂದು ಸರಗಕ್ಯೂಲರ್ ನ್ನೇ ತರುವ ಅವಶ್ಯಕತೆ ಇದೆ ಎಂದು ಸುಂದರೇಶ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್, ಗೋಪಾಲ್ ಯಡಗೆರೆ, ಸೂಡಾ ಆಯುಕ್ತರಾದ ವಿಶ್ನನಾಥ್ ಮುತ್ತಜ್ಜಿ, ನಾಗರಾಜ್ ನೇರಿಗೆ, ವಾರ್ತ ಇಲಾಖೆಯ ಅಧಿಕಾರಿ ಮಾರುತಿ ಮೊದಾದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.