ಜೈಲಿನಲ್ಲಿರುವ KSISF ಪಿಎಸ್ ಐ ಮೇಲೆ ಹಲ್ಲೆ

ಸುದ್ದಿಲೈವ್/ಶಿವಮೊಗ್ಗ

ಕಾರಾಗೃಹದ ಕೆಎಸ್ಐಎಸ್ಎಫ್ ಪಿಎಸ್ಐನ ಮೇಲೆ ಕಾರಾಗೃಹದ ಖೈದಿಯೋರ್ವ ಅವ್ಯಾಚ್ಯ ಶಬ್ಧಗಳಲ್ಲಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಕಾರಾಗೃಹದಲ್ಲಿ ಸಂದರ್ಶಕರ ಕೊಠಡಿಯವರೆಗೆ ಬಂದ‌ ಖೈದಿ ರೋಹಿದಾಸ್ ಶರಣಪೂಜಾರಿ ಬಂದು ಅವಧಿ ಮುಗಿದರೂ ಸಂದರ್ಶಕರನ್ನ ಬಿಡುವಂತೆ KSISF ಪಿಎಸ್ಐ  ಶಶಿಕುಮಾರ್ ಪವಾರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಜೈಲಿನಲ್ಲಿ ಖೈದಿಗಳನ್ನ ಭೇಟಿಗೆ ಬರುವ ಸಂಬಂಧಿಕರ ಜೊತೆ ಸಮಯ ನಿಗದಿ ಪಡಿಸಲಾಗುತ್ತದೆ.

ಆದರೆ ಈ ಖೈದಿಗೆ ಸಂದರ್ಶಕರ ಜೊತೆ ಭೇಟಿಗೆ ಅವಕಾಶ ಇಲ್ಲದಿದ್ದರೂ. ಸಂದರ್ಶಕರ ಕೊಠಡಿಯಲ್ಲಿ ಕಿಂಡಿಯ ಮೂಲಕ ಕೊಡುವ ಹಣ್ಣುಗಳೂ, ಸಿಹಿ ತಿಂಡಿಗಳನ್ನ ನೀಡಲು ಅವಕಾಶ ಇರುತ್ತದೆ. ಆ ಕಿಂಡಿಯ ಮೂಲಕವೇ ಪವಾರ್ ಅವರ ಮುಖಕ್ಕೆ ಹಲ್ಲೆ ನಡೆಸಿದ್ದಾನೆ.

ಪವಾರ್ ಗೆ ಕಣ್ಣಿಗೆ ತಾಗಿದೆ. ಇವರ ಸಹಪಾಠಿಗಳಿಗೆ ಅವ್ಯಚ್ಯ‌ಶಭ್ಧಗಳಿಂದ ಬೈದಿದ್ದಾನೆ. ಈ ಕುರಿತು ಸಂಬಂಧಿಸಿದ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ಹಲ್ಲೆ, ಆಗಿರುವ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/17194

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close