ಸುದ್ದಿಲೈವ್/ಶಿವಮೊಗ್ಗ
ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ 11 ಜನರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. Knights in khaki ಎಂಬ ಕಾರ್ಯಕ್ರಮದ ಅಡಿಯಲ್ಲಿ ಮೈಸೂರಿನ ಪೇಟ ತೊಡಿಸಿ ಸನ್ಮಾನಿಸಲಾಗಿದೆ.
ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ಮಲ್ನಾಡ್ ಮಾಸ್ಟರ್ಸ್ ನ ವತಿಯಿಂದ ಇಂದು ರಂದು ಸಂಜೆ ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ Knights In Khaki ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಸನ್ಮಾನಿಸಿದ್ದಾರೆ.
1) ಆಂತೋನಿ. ಸಿ. ಎಎಸ್ಐ, ದೊಡ್ಡಪೇಟೆ ಪೊಲೀಸ್ ಠಾಣೆ, 2) ನೀಲಕಂಠಾಚಾರಿ ಜಿ.ಎಂ, ಸಿ.ಹೆಚ್.ಸಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, *3) ಆನಂದ ಎಸ್, ಸಿಪಿಸಿ, ಉಪ ವಿಭಾಗ ಕಛೇರಿ ಭದ್ರಾವತಿ, 4) ಪ್ರವೀಣ್ ಕುಮಾರ್ ಎಸ್.ಬಿ ಸಿಪಿಸಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, 5) ರಾಘವೇಂದ್ರ ಕೆ. ಸಿ. ಸಿಪಿಸಿ, ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ,
6) ವೆಂಕಟೇಶ್ ಜಿ. ಸಿ.ಹೆಚ್.ಸಿ, ನಗರ ಪೊಲೀಸ್ ಠಾಣೆ, 7) ರಾಘವೇಂದ್ರ. ಬಿ. ಎ.ಆರ್.ಎಸ್.ಐ, ಡಿಎಆರ್ ಘಟಕ, ಶಿವಮೊಗ್ಗ, 8) ಕಿರಣ್ ಬಿ. ಎಂ, ಪಿಸಿ (ಎಫ್ಪಿಯು), ಬೆರಳು ಮುದ್ರೆ ಘಟಕ ಶಿವಮೊಗ್ಗ, 9) ಪುಟ್ಟು ಸಿಂಗ್, ಎಎಸ್ಐ, ಡಿಸಿಆರ್ಬಿ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ, 10) ಶ್ರೀಮತಿ ಶಶೀತ ಕೆ.ಆರ್, ಮ.ಹೆಚ್.ಸಿ, ಡಿಎಸ್ಬಿ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ಮತ್ತು 11) ಶ್ರೀ ಬಿ.ಎಸ್. ಬಾಲಕೃಷ್ಣ, ಎಎಸ್ಐ (ನಿಸ್ತಂತು), ಜಿಲ್ಲಾ ನಿಸ್ತಂತು ಘಟಕ ಶಿವಮೊಗ್ಗ ಜಿಲ್ಲೆ ರವರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮುಖ್ಯ ಅಥಿತಿಗಳಾಗಿ, ದೇವಾನಂದ್, ಏರಿಯಾ ಚೇರ್ ಮನ್, ಏರಿಯಾ 13, ಸುಶ್ರುತ್, ಅಸಿಸ್ಟೆಂಟ್ ಏರಿಯಾ ಚೇರ್ ಮನ್, ಏರಿಯಾ 13, ಶರಣ್, ಚೇರ್ ಮನ್ ಮಲ್ನಾಡ್ ಮಾಸ್ಟರ್ಸ್, ವಿಶ್ವಾಸ್ ಕಾಮತ್, ಚೇರ್ ಮನ್, ಶಿವಮೊಗ್ಗ ರೌಂಡ್ ಟೇಬಲ್, ಪ್ರದೀಪ್, ಚೇರ್ ಮನ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ರೌಂಡ್ ಟೇಬಲ್ ನ ಪದಾಧಿಕಾರಿಗಳು, ಕುಟುಂಬ ಸದಸ್ಯರು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುಟುಂಬ ಸದಸ್ಯರುಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17537