ಇಂದಿನಿಂದ IPC ಸೆಕ್ಷನ್ ಬದಲು BNS ಎಂದು ನಾಮಕರಣ-ಏನೆಲ್ಲಾ ಬದಲಾವಣೆಯಾಗಲಿದೆ?

ಸುದ್ದಿಲೈವ್/ಶಿವಮೊಗ್ಗ

ಇಂದಿನಿಂದ IPC ಮತ್ತು CRPS ಸೆಕ್ಷನ್ ಗಳ ಹೆಸರುಗಳು ಬದಲಾಗಿವೆ. IPC ಬದಲಿಗೆ BNS , CRPC ಬದಲಿಗೆ BNSS, IEA ಬದಲಿಗೆ BSA ಎಂದು ನಾಮಕರಣಗೊಂಡಿದೆ. ಹಳೆಯ 95% ಸಿಆರ್ ಪಿಸಿಯನ್ನ ಮುಂದುವರೆಸಿದರೂ 5% ಈ ಸೆಕ್ಷನ್ ನಲ್ಲಿ ಜಾರಿಗೊಳಿಸಲಾಗಿದೆ.

ಪ್ರಮುಖ ಬದಲಾವಣೆಗಳು ಹೀಗಿವೆ.‌ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಗ್ಯಾಂಗ್ ರೇಪ್ ಮಾಡಿದರೆ ಮರಣದಂಡನೆ ವಿಧಿಸಲಾಗಿದೆ. ಸಂತ್ರಸ್ತರಿಗೆ FIR ಪ್ರತಿ ಹಾಗು ಚಾರ್ಜ್ ಶೀಟ್ ಪ್ರತಿ ಎರಡೂ ನೀಡಬೇಕು ಹಾಗು ಅವರಿಗೆ ತನಿಖೆಯ ಪ್ರಗತಿಯನ್ನೂ ತಿಳಿಸಬೇಕಿದೆ.

ಅಪರಾಧ ನಡೆದ ಬಗ್ಗೆ ಯಾವ ಪೋಲಿಸ್ ಠಾಣೆಯಲ್ಲಾದರೂ ದೂರು ನೀಡಬಹುದು.‌ ದೇಶದ ಯಾವುದೇ ಮೂಲೆಯಿಂದಲೂ ಬಂದು ದೂರು ನೀಡಬಹುದು. ದೂರನ್ನು ಆನ್ ಲೈನ್ ಮೂಲಕವೂ ನೀಡ ಬಹುದು ಆದರೆ 3 ದಿನದಲ್ಲಿ ಬಂದು ಸಹಿ ಹಾಕ ಬೇಕು ಎಂದು ಹೊಸ ನಿಯಮಾವಳಿಗಳು ಹೇಳುತ್ತಿವೆ.

ತ್ವರಿತವಾಗಿ ನ್ಯಾಯ ಒದಗಿಸುವ ಸಲುವಾಗಿ‌ ನ್ಯಾಯಾಲಯಗಳಿಗೆ ಪ್ರತಿ ಹಂತದಲ್ಲೂ ಸಮಯವನ್ನು ನಿಗದಿಪಡಿಸಲಾಗಿದೆ. ನ್ಯಾಯಾಲಯಗಳು ಪ್ರಮುಖ ಕಾರಣವಿಲ್ಲದೆ ವಿಚಾರಣೆ ಮುಂದೂಡುವಹಾಗಿಲ್ಲ.

ಭಯೋತ್ಪಾದನಾ ಕೃತ್ಯಗಳನ್ನು & ಸಂಘಟಿತ ಅಪರಾದ ತಡೆಯಲು ಹೊಸ ಸೆಕ್ಷನ್ ಬಿ.ಎನ್.ಎಸ್ ನಲ್ಲಿ‌ ಸೇರಿಸಲಾಗಿದೆ.

ಮದುವೆಯಾಗುವುದಾಗಿ ಮಾತುಕೊಟ್ಟು ಅವಳೊಂದಿಗೆ ಲೈಂಗಿಕ ಕ್ರಿಯೆ ಮಾಡಿದರೆ ಅದು ಅಪರಾದವಾಗಲಿದ್ದು ಅದಕ್ಕೆ 10 ವರ್ಷ ಶಿಕ್ಷೆ ವಿದಿಸಲಾಗುತ್ತೆ. ಆದರೆ ಹೊಸ ಕಾನೂನಿನ ಪ್ರಕಾರ ಆತ್ಮಹತ್ಯೆ ಪ್ರಯತ್ನ ಅಪರಾಧವಲ್ಲ

ಆದರೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲು ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅಪರಾಧ ವಾಗಲಿದಸ. ಸಣ್ಣಪುಟ್ಟ ಅಪರಾಧ ಗಳಿಗೆ ಸಮುದಾಯ ಸೇವೆ ಎಂಬ ಶಿಕ್ಷೆ ನೀಡಲಾಗುತ್ತದೆ.
ಉದಾಹರಣೆಗೆ ಗಿಡಗಳಿಗೆ ನೀರು ಹಾಕುವುದು. ವೃದ್ದಾರ್ಶಮದಲ್ಲಿ ಸೇವೆ ಮಾಡುವ ಶಿಕ್ಷೆಯನ್ನ ಹೊಸ ಐಪಿಸಿಯಲ್ಲಿ ಸೇರಿಸಲಾಗಿದೆ.
ಇದು ಜೈಲಿನ ಭಾರ ಇಳಿಸಲಿದೆ.

ಇದನ್ಬೂ‌ಓದಿ-https://suddilive.in/archives/18195

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close