ಸುದ್ದಿಲೈವ್/ಶಿವಮೊಗ್ಗ
ಗೋಹತ್ಯೆ ವಿಚಾರದಲ್ಲಿ ಎರಡು ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಅನುಪಿನಕಟ್ಟೆಯ ತ್ಯಾಜ್ಯ ವಿಲೇವಾರಿಯಲ್ಲಿ ಗೋವಿನ ಚರ್ಮಗಳನ್ನ ತುಂಬಿಕೊಂಡಿದ್ದ ವಾಹನದ ವಿಡಿಯೋ ಬಗ್ಗೆ ಸು ಮೋಟೋ ದಾಖಲಾದರೆ
ಮತ್ತೊಂದು ಪ್ರಕರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಹಸುವನ್ನ ಖರೀದಿ ಮಾಡಿಕೊಂಡು ಬಂದು ಕಡಿದು ಹಣಕ್ಕಾಗಿ ದನದ ಮಾಂಸ ಮಾರಾಟ ಮಾಡಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ದೂರು ದಾಖಲಾಗಿದೆ.
ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಿನಕಟ್ಟೆಯಲ್ಲಿರುವ ಮಹಾನಗರ ಪಾಲಿಕೆಯ ಕಸ ವಿಲೇವಾರಿ ಘಟಕದಲ್ಲಿ ವಾಹನದಲ್ಲಿ ಗೋತ್ಯಾಜ್ಯವನ್ನ ತಂದು ವಿಲೇ ಮಾಡುವ ಉದ್ದೇಶದಿಂದ ವಾಹನದಲ್ಲಿರಿಸಿರುವ ಬಗ್ಗೆ ದೂರು ದಾಖಲಾಗಿದೆ.
ಈ ವಿಡಿಯೋ ಕುರಿತುಂತೆ ಸುದ್ದಿಲೈವ್ ಸುದ್ದಿಯನ್ನೂ ಮಾಡಿತ್ತು. ಅದರಂತೆ ಅಬ್ದುಲ್ ರಶೀದ್ ಎಂಬುವರು ಹಬ್ಬಕ್ಕಾಗಿ ಚೀಲೂರಿನಿಂದ ತಂದು ವಾಹನ ನಿಲ್ಲಿಸುವ ಜಾಗದಲ್ಲಿ ಕಟ್ಟಿದ್ದರು. ಟಿಪ್ಪುನಗರದ 5 ನೇ ತಿರುವಿನ ಬಲಭಾಗದಲ್ಲಿ ಅಬ್ದುಲ್ ರಶೀದ್ ಅವರ ಪುತ್ರ ಮೊಹಮದ್ ರಿಜ್ವಾನ್ ಬಳಿ ಹೋರಿಯನ್ನ ಕಡಿಸಿರುವ ಬಗ್ಗೆ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಶೀದ್ ಮತ್ತು ರಿಜ್ವಾನ್ ವಿರುದ್ಧ ಎಪ್ಐಆರ್ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/17282