ರೈಲು ಹರಿದು ಕಾರ್ಮಿಕನ ಸಾವು

ಸುದ್ದಿಲೈವ್/ಶಿವಮಗ್ಗ

ಶಿವಮೊಗ್ಗದ ವಿದ್ಯಾನಗರ ರೈಲ್ವೆ ಸ್ಟೇಷನ್ ಬಳಿ ರೈಲಿಗೆ ಸಿಲುಕಿ ವೃದ್ಧನೋರ್ವ ಸಾವನ್ನಪ್ಪಿದ್ದಾನೆ. ಸೌದೆ ಆರಿಸಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೈಸೂರು ಕಡೆಯಿಂದ ತಾಳಗುಪ್ಪ ಕಡೆ ಹೊರಟಿದ ರೈಲು ಶಿವಮೊಗ್ಗ ವಿದ್ಯಾನಗರದ ರೈಲ್ವೆ ನಿಲ್ದಾಣದಲ್ಲಿ ಸೌದೆ ಆರಿಸಲು ಬಂದಿದ್ದ ರುದ್ರಪ್ಪ (68) ರೈಲಿಗೆ ಸಿಲುಕಿ ಸಾವಾಗಿದೆ.

ಗುರುಪುರದ ನಿವಾಸಿ ರುದ್ರಪ್ಪ, ಪ್ರತಿ ದಿನ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ಸೌದೆ ಆಯಲು ಬರುತ್ತಿದ್ದರು. ಅರ್ಧ ಕಿವುಡು, ಅರ್ಧ ಕಣ್ಣು ಮಂಜಾಗಿದ್ದ ಕಾರಣ ರೈಲಿನ ಶಬ್ದ ಕೇಳದೆ ಆತನ ಮೇಲೆ ಹರಿದಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ರುದ್ರಪ್ಪ ಇತ್ತೀಚೆಗೆ ಅನಾರೋಗ್ಯವಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಕೂಲಿಗೆ ಹೋಗಬೇಲಿದ್ದವರು‌ಮನೆಯಲ್ಲಿ ಸೌದೆ ಖಾಲಿಯಾಗಿದೆ ಎಂದು ಸ್ಟೇಷನ್‌ ಬಳಿ ಬಂದಾಗ ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/16054

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close