ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಅಕ್ರಮ ಗೋ ಸಾಗಾಣಿಕೆ, ಗೋಮಾಂಸ ಮಾರಾಟದ ಕೇಂದ್ರದ ಮೇಲೆ ಪೊಲೀಸರ ದಾಳಿ ನಡೆಸುವಂತೆ ಮಾಡುತ್ತಿದ್ದ ಹಿಂದೂ ಜಾಗರಣ ವೇದಿಕೆಯ ಮೇಲೆ ದೂರು ದಾಖಲಾಗಿದ್ದು, ಇದೊಂದು ರಾಜಕೀಯ ಪ್ರೇರಿತ ಮತ್ತು ತುಷ್ಠೀಕರಣ ರಾಜಕಾರಣ ಎಂದು ಸಂಘಟನೆ ಆಗ್ರಹಿಸಿದೆ.
ಮೇ.31ರಂದು ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಿಂಗ್ ಹೋಟೆಲ್ ನಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರು ಸುಮೋಟೋ ಕೇಸ್ ಹಾಕಿದರೆ, ಇದರಲ್ಲಿ ಹಿಂದೂ ಜಾಗರಣ ವೇದಿಕೆ ದೇವರಾಜ್ ಅರಳಹಳ್ಳಿ ಅವರ ಮೇಲೆ ಹೋಟೆಲ್ ನ ಸಿಬ್ಬಂದಿ ಮೂಲಕ ದೂರು ದಾಖಲಿಸಿರುವುದು ಚರ್ಚೆಗೆ ಕಾರಣವಾಗಿದೆ.
ಹೊಸಮನೆ ಪೊಲೀಸರು ಬಾತ್ಮೀದಾರರಿಂದ ಬಂದ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ಅಕ್ರಮ ಗೋಮಾಂಸದ ಊಟ ಮಾರಾಟದ ಬಗ್ಗೆ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಆದರೆ ಹೋಟೆಲ್ ನ ಸಿಬ್ಬಂದಿ ಸಲೀಂ ಎಂಬುವರಿಗೆ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ದೇವರಾಜ್ ಅರಳಹಳ್ಳಿ ಹೋಟೆಲ್ ಗೆ ಹೋಗಿ ಅವ್ಯಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಲಾಗಿದೆ ಎಂದು 504 ಮತ್ತು 506 ಪ್ರಕರಣದ ಅಡಿ ದೂರು ದಾಖಲಿಸಲಾಗಿದೆ.
ಈ ಕುರಿತು ಹಿಂದೂ ಸಂಘಟನೆಗಳು ಕೆಂಡಕಾರಿವೆ. ಇವೆಲ್ಲದರ ಹಿಂದೆ ಸ್ಥಳೀಯ ಶಾಸಕರ ಕುಮ್ಮಕ್ಕಿದೆ ಎಂದು ದೂರಿದೆ. ಸುಮೋಟೋ ಪ್ರಕರಣದಲ್ಲಿ ದೇವರಾಜ್ ಹರಹಳ್ಳಿ ಅವರು ಹೇಗೆ ಹೋಟೆಲ್ ಸಿಬ್ಬಂದಿಯನ್ನ ಸಂಪರ್ಕಿಸಲಾಗುತ್ತದೆ ಎಂದು ದೂರಲಾಗಿದೆ.
ಇದನ್ನೂ ಓದಿ-https://suddilive.in/archives/16088