ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನ ಚುರುಕು

ಸುದ್ದಿಲೈವ್/ಶಿವಮೊಗ್ಗ

ಐದು ವರೆ ಜಿಲ್ಲೆಯಲ್ಲಿ ನಡೆಯಿತ್ತಿರುವ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು ಎರಡು ಗಂಟೆಯ ವರೆಗೆ ಶಿವಮೊಗ್ಗದಲ್ಲಿ ನೈರುತ್ಯ ಪದವೀದರ ಕ್ಷೇತ್ರದಲ್ಲಿ ಶೇ.56.85 ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಶೇ. 67.90 ರಷ್ಟು ಮತದಾನವಾಗಿದೆ.

ಹಿಂದೆಂದೂ ಕಂಡು ಕಾಣದಷ್ಟು ಮತದಾರರು ಇಂದು ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿರುವುದು ವಿಶೇಷವಾಗಿದೆ. ವಿನೋಬ‌ನಗರ ಡಿವಿಎಸ್ ಕಾಲೇಜಿನಲ್ಲಿ ಬಿಜೆಪಿ ನೈರುತ್ಯ ಪದವೀಧರ ಕ್ಷೇತ್ರದ ಡಾ.ಧನಂಜಯ ಸರ್ಜಿ ಮತದಾನ ಮಾಡಿದರೆ.

ಪಕ್ಷೇತರ ಅಭ್ಯರ್ಥಿ ಎಸ್ ಪಿ ದಿನೇಶ್ ಅದೇ ಶಾಲೆಯಲ್ಲಿ ಮತಚಲಾಯಿಸಿದ್ದಾರೆ. ಈ ವೇಳೆ ರಾಜಕಾರಣ ಮರೆತು ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಕೈಕುಲಿಕಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಸೋಸೆಯೊಂದಿಗೆ ಶಿವಮೊಗ್ಗ ಡಯಟ್ ನಲ್ಲಿ ಈಶ್ವರಪ್ಪ ಮತಚಲಾಯಿಸಿದರು.

uhಪಿಡಬ್ಲೂಡಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಎಂಎಲ್ ಸಿ ಡಿ.ಎಸ್ ಅರುಣ್ ಮತದಾನ ನಡೆಸಿದ್ದಾರೆ. ಶಿವಮೊಗ್ಗದ ಡಿವಿಎಸ್ ಪ್ರೌಢ ಶಾಲೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಬಂದು ಮತದಾನದ ಮಾಡಿದ ದೃಶ್ಯ ಲಭ್ಯವಾಗಿದೆ.

ಅದರಂತೆ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ, ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೊರಬದಲ್ಲಿ ಮಾಜಿ ಸಚಿವ‌ ಕುಮಾರ‌ ಬಂಗಾರಪ್ಪ ಮತದಾನ ಮಾಡಿರುವ‌ದೃಶ್ಯಗಳು ಲಭ್ಯವಾಗಿದೆ.‌

ಇದನ್ನೂ ಓದಿ-https://suddilive.in/archives/16150

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close