ವೈದ್ಯನಿಂದ ಶಾಸಕರಾದ ಡಾ.ಸರ್ಜಿ

ಸುದ್ದಿಲೈವ್/ಶಿವಮೊಗ್ಗ

ಹಲವು ಟೀಕೆ, ಟಿಪ್ಪಣಿಗಳನ್ನ ಎದುರಿಸಿದ್ದ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಮೊದಲಬಾರಿಗೆ ಶಾಸಕರಾಗಿ ಗೆದ್ದು ಬೀಗಿದ್ದಾರೆ.

85 ಸಾವಿರ ಮತಗಳ ನೋಂದಣಿಯಲ್ಲಿ ಶೇ.80.61ರಷ್ಟು ಮತದಾನವಾಗಿತ್ತು. ಅಂದರೆ 66,497 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಡಾ.ಧನಂಜಯ ಸರ್ಜಿಗೆ 37,627 ಮತಗಳು ಚಲಾವಣೆಯಾಗಿದೆ. ಇದರಿಂದ ಡಾ.ಸರ್ಜಿ ನೈರುತ್ಯ ಪದವೀಧರ ಕ್ಷೇತ್ರದಿಂದ ಗೆದ್ದು ಜಯಭೇರಿ ಭಾರಿಸಿದ್ದಾರೆ.

ಇವರಿಗೆ ಪ್ರಬಲ ಅಭ್ಯರ್ಥಿಗಳಾಗಿದ್ ಕಾಂಗ್ರೆಸ್ ನ ಆಯನೂರು ಮಂಜುನಾಥ್, ಪಕ್ಷೇತರ ಅಭ್ಯರ್ಥಿಯಾಗಿದ್ದ, ರಘುಪತಿ ಭಟ್ಟರು, ಮತ್ತು ಎಸ್ಪಿ ದಿನೇಶ್ ಮತಗಳು ಹೀಗಿವೆ. ಆಯನೂರು ಮಂಜುನಾಥ್ 13,516 ಮತಗಳು ಪಡೆದರೆ, ಎಸ್ಪಿ ದಿನೇಶ್ 2515 ಮತಗಳು, ರಘುಪತಿ ಭಟ್ಟರಿಗೆ 7039 ಮತಗಳು ಲಭಿಸಿದೆ.

ಕಣದಲ್ಲಿ ಒಟ್ಟು 10 ಜನರಿದ್ದರು. ಇದರಲ್ಲಿ ತಿರಸ್ಕೃತಗೊಂಡ ಮತಗಳು 5115 ಮತಗಳಾಗಿವೆ. ಮತದಾನಕ್ಕೂ ಮುನ್ನ ಡಾ.ಸರ್ಜಿ ವಿರುದ್ಧ ಅಪಪ್ರಚಾರಗಳು ನಡೆದವು. ವೀಡಿಯೋ ವೈರಲ್ ಮಾಡಲಾಯಿತು. ಆದರೆ ಚುನಾವಣೆ ಪ್ರಚಾರ, ಮತಬೇಟೆ, ಮಾಧ್ಯಮಗಳಲ್ಲಿ ಸುದ್ದಿ ಹೇಗೆ ಪ್ರಚಾರ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸಿದ್ದ ಸರ್ಜಿ ಎಲ್ಲೂ ಹೇಳಿಕೆಯನ್ನ ನೀಡಿರಲಿಲ್ಲ.

ಇದರ ಜೊತೆಗೆ ನೈರುತ್ಯ ಪದವೀಧರ ಕ್ಷೇತ್ರ ಕಳೆದ 42 ವರ್ಷಗಳಿಂದ ಬಿಜೆಪಿಯ ಪಕ್ಷದ ಪರವಾಗಿಯೇ ಬೆಂಬಲಿಸುತ್ತಾ ಬಂದಿದ್ದು, ಈ ಬಾರಿಯೂ ಬಿಜೆಪಿ ಬೆನ್ನಿಗೆ ನಿಂತಿದೆ. ಎಂಎಲ್ ಸಿ ಡಿ.ಎಸ್. ಅರುಣ್, ಶಾಸಕ ಚೆನ್ನಬಸಪ್ಪನವರ ಅವಿರತ ಶ್ರಮ ಸರ್ಜಿ ಗೆಲುವಿಗೆ ಕಾರಣವಾಗಿತ್ತು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡರು ಎರಡನೇ ಬಾರಿಗೆ ಗೆದ್ದು ಬೀಗಿದ್ದಾರೆ.

ವೈದ್ಯರಾಗಿದ್ದ ಡಾ.ಧನಂಜಯ ಸರ್ಜಿ ಈಗ ಜನ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಈ ಹಿಙದೆಯೇ ಶಾಸಕರಾಗ ಬಯಸಿದ್ದ ಅವರು ಕಾರಣಾಂತರದಿಂದ ಸ್ಪರ್ಧಿಸಲು ಅವಕಾಶ ದೊರೆತಿರಲಿಲ್ಲ. ಈಗ ಆ ಅವಕಾಶ ದೊರೆತಿದ್ದು ಶಾಸಕರಾಗಿ ಹೊರಹೊಮ್ಮಿದ್ದಾರೆ. ಡಾಕ್ಟರ್ ಜೊತೆಗೆ ಈಗ ಎಂಎಲ್ ಸಿ ಎಂಬ ಪದವೂ ಸೇರಿಕೊಂಡಿದೆ.

ಕಾಂಗ್ರೆಸ್ ಗೆ ಡಾ.ಸರ್ಜಿ ಜಯ ಮುಖಭಂಗ ಉಂಟು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿಯೂ ನೈರುತ್ಯ ಪದವೀಧರ ಕ್ಷೇತ್ರದ ಐದು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ದಾವಣಗೆರೆಯಲ್ಲಿ ಮಾತ್ರ ಕಾಂಗ್ರೆಸ್ ಜಯಬೇರಿಯಾಗಿದೆ. ಇದರಿಂದ ಶಿವಮೊಗ್ಗದ ಜಿಲ್ಲಾ‌ಉಸ್ತುವರಿ ಸಚಿವ ಮಧು ಬಂಗಾರಪ್ಪನವರಿಗೆ ತೀವ್ರ ಮುಜುಗರ ಅನುಭವುಸುವಂತಾಗಿದೆ.

ಇದನ್ನೂ ಓದಿ-https://suddilive.in/archives/16394

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close