ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ರವಿಂದ್ರನಗರ ಹಾಗೂ ವಿನೋಬನಗರದಲ್ಲಿರುವ”ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್” ಶಾಲೆಯಲ್ಲಿ ಇಂದು ಮಕ್ಕಳ ಸಡಗರ ಮತ್ತು ಸಂಭ್ರಮ ಮುಗಿಲು ಮುಟ್ಟಿತ್ತು. ಮಕ್ಕಳು ಅಕ್ಷಶಃ ಹಬ್ಬವನ್ನ ಆಚರಿಸಿದ್ದಾರೆ ಎಂದರೆ ತಪ್ಪಾಗಲಾರದು. ಖುದ್ದು ಶಾಲೆಯ ಮಾಲೀಕ ಅನೂಪ್ ಪಟೇಲ್ ಮತ್ತು ಪತ್ನಿ ಮಕ್ಕಳನ್ನ ಬರಮಾಡಿಕೊಂಡಿರುವುದು ವಿಶೇಷವಾಗಿತ್ತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಹೊಸದಾಗಿ ಸೇರಿದ ಶಾಲೆಗೆ ಸೇರಿದ ಮಕ್ಕಳನ್ನ ಮತ್ತು ಶಾಲೆ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವೃಂದ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಯಿತು.
ಇಲ್ಲಿನ ವಿಶೇಷತೆ ಏನೆಂದರೆ,ಇಲ್ಲಿ ಓದಲು ಬಯಸುವ ಪ್ರತಿ ವಿದ್ಯಾರ್ಥಿಗೂ ಕರಾಟೆ ಕ್ಲಾಸ್ , ಮ್ಯೂಸಿಕ್ ಕ್ಲಾಸ್ , ಡ್ಯಾನ್ಸ್ ಕ್ಲಾಸ್ ಉಚಿತವಾಗಿದೆ. ಅಂತೆಯೇ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನ ಶಾಲೆಯಲ್ಲಿ ಮಕ್ಕಳ ಹಬ್ಬದ ವಾತಾವರಣ ನಿರ್ಮಿಸಲಾಗಿದ್ದ ಸಮಾರಂಭದಲ್ಲಿ ನೀಡಿದ್ದು ವಿಶೇಷವಾಗಿದೆ.
ಜೊತೆಗೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ರಾಗಿನಿ ಸಿಂಗ್ ಇವರ ಉಪಸ್ಥಿತಿ ಯಲ್ಲಿ ಶಾಲೆಯ ಶಿಕ್ಷಕ ಬಳಗ ಮಕ್ಕಳಿಗೆ ಉಚಿತ ನೋಟ್ ಬುಕ್ಸ್ ಅನ್ನು ವಿತರಿಸಲಾಯಿತು.
ಸುಂದರವಾದ ಸುಸಜ್ಜಿತ ಕಟ್ಟಡ, ನುರಿತ ಶಿಕ್ಷಕ ಬಳಗ, ಹಾಗೂ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಇರುವ ಶಿವಮೊಗ್ಗದ ಪ್ರಥಮ ರ್ಯಾಂಕ್ ಪಡೆದ ಶಾಲೆ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು ಇನ್ನು ಕೆಲವೇ ಕೆಲವು ಸೀಟುಗಳು ಮಾತ್ರ ಲಭ್ಯವಿರುತ್ತದೆ.ಅಡ್ಮಿಶನ್ ಗಾಗಿ ಸಂಪರ್ಕಿಸಿ: 8296971222 9741004979, 9353727808
ಇದನ್ನೂ ಓದಿ-https://suddilive.in/archives/16022