ಸುದ್ದಿಲೈವ್/ಶಿವಮೊಗ್ಗ
ರಾಹುಲ್ ಗಾಂಧಿ ಅವರು ಸಂಸದರಾಗಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಪಡೆದಿದ್ದಾರೆ. ಆದರೆ ಪುಸ್ತಕವನ್ನ ಇಟ್ಟುಕೊಂಡು ನಾವು ಸಂವಿಧಾನ ರಕ್ಷಕರು ಎಂದು ಚುನಾವಣೆ ಸಂದರ್ಭದಲ್ಲಿ ಬಿಂಬಿಸಲಾಗಿದೆ. ಇದು ನೆರೇಟಿವ್ ಬಿಲ್ಟ್ ಮಾಡಿ ಸತ್ಯವನ್ನಮುಚ್ಚಿ ಜನರ ಎದುರು ಬೇರೆ ರೀತಿ ಬಿಂಬಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಬಿಧಾನ ರಕ್ಷಕರು ಎಂದು ಹೇಳುವ ಕಾಂಗ್ರೆಸ್ ಬಿಜೆಪಿ ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಬಿಂಬಿಸಿದ್ದಾರೆ. ಆದರೆ ದೇಶದಲ್ಲಿ ತುರ್ತುಪತಿಸ್ಥಿತಿ ಹೇರಿ ಸಂವಿಧಾನವನ್ನ ತಿದ್ದಿದವರುಎಂದು ದೂರಿದರು.
ಆರ್ಟಿಕಲ್ 322,356 ನಲ್ಲಿ ತುರ್ತು ಪರಿಸ್ಥಿತಿ ಹೇರಲು ಅವಕಾಶವಿದೆ. ಆರ್ಥಿಕ ಅಸ್ಥಿರತೆ, ರಾಜಕೀಯ ಅಸ್ಥಿರತೆ ಮೊದಲಾದ ವೇಳೆ ತುರ್ತುಪರಿಸ್ಥಿತಿ ಹೇರಲಾಗಿದೆ. ಸಂಸತ್ ನಲ್ಲಿ ಚರ್ಚಿಸದೆ ಎಮೆರ್ಜೆನ್ಸಿ ಹೇರಲಾಗಿದೆ. ಅಂಬೇಡ್ಕರ್ ಅವರು ಅನೇಕ ದಿನಗಳ ನಂತರ ಸಂವಿಧಾನ ರಚಿಸಿ ಹೇರಲಾಯಿತು.
ತುರ್ತುಪರಿಸ್ಥಿತಿ ಜಾರಿ ತರಲು 38ನೇ ತಿದ್ದುಪಡಿ ತಂದರು. ನಂತರ ಆರ್ಟಿಕಲ್ ನ್ನ 39 ನೇ ತಿದ್ದುಪಡಿತರಲಾಯಿತು. ಸುಪ್ರೀಂ ಕೋರ್ಟ್ ವಿಚಾರಣೆ ಮಾಡುವ ಹಕ್ಕಿಲ್ಲ ಎಂದು ಜಾರಿಗೊಳಸಲಾಯಿತು. ಇದಾದ ನಂತರ 40 ನೇ ತಿದ್ದುಪಡಿ ತರಲಾಯಿತು. ಮಾದ್ಯಮಗಳ ಮೇಲೆ ಹೇರಲಾಯಿತು.
ಕೋರ್ಟ್ ನಲ್ಲಿ ಪ್ರಶ್ನಿಸದಂತೆಯೂ 40 ನೇ ತಿದ್ದುಪಡಿ ತರಲಾಯಿತು. ಹಾಗೇ ಮೂರು ತಿಂಗಳಲ್ಲಿ ಮೂರು ಬಾರಿ ತಿದ್ದಿಪಡಿ ತರಲಾಯಿತು. 41. ನೇ ತಿದ್ದುಪಡಿಯಲ್ಲಿ ರಾಷ್ಟ್ರಪತಿಗಳಿಗೆ ತುರ್ತುಪರಿಸ್ಥಿತಿ ವಿಚಾರಣೆಗೆ ಅಧಿಕಾರವಿಲ್ಲದಂತಾಯಿತು. 42 ನೇ ತಿದ್ದುಪಡಿ ತರಲಾಯಿತು. ಇಷ್ಟು ತಿದ್ದುಪಡಿಗಳು ಇಂದಿರಾಗಾಂಧಿಯವರನ್ನ ರಕ್ಷಿಸುವ ತಿದ್ದುಪಡಿ ಮನನ ಯಾಗಿದ್ದವು ಎಂದರು.
ಆದರೆ ಕಾಂಗ್ರೆಸ್ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡಲಿದೆ ಎಂದು ಪ.ಜಾ.ಮತ್ತು ಪ.ವ ನಡುವೆ ವಿಷ ಬೀಜಹಾಕಲಾಯಿತು. ಅಂಬೇಡ್ಕರ್ ಅವರೇ ಹುಟ್ಟು ಬಂದರು ಮೀಸಲಾತಿ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನೆಹರೂ ಗಾಂಧಿ 58 ತಿದ್ದುಪಡಿ, ವಾಜಪೇಯಿ 6 ತಿದ್ದುಪಡಿ ತಂದರೆ ಮೋದಿ 10 ವರ್ಷದಲ್ಲಿ 8 ತಿಧ್ದುಪಡಿ ತಂದುದ್ದಾರೆ. 106 ನೇ ತಿದ್ದುಪಡಿ ಮಾಡಿ ನಾರಿಶಕ್ತಿಗೆ ಶೇ.33 ಮೀಸಲು ತರಲಾಯಿತು. ಹೀಗೆ ಸಂವಿಧಾನವನ್ನ ರಕ್ಷಿಸಿರುವುದು ಬಿಜೆಪಿ ಕಾಂಗ್ರೆಸ್ ಅಲ್ಲ. ಮೋದಿ ಪ್ರಮಾಣ ವಚನದ ವೇಳೆ ಸಂವಿಧಾನ ತೀರಿಸಿದ್ದನ್ನ ಬೇರೆ ರೀತಿ ಬಿಂಬಿಸಿ ರಾಹುಲ್ ಗಾಂಧಿ ಸಂವಿಧಾನ ಹಿಡಿದು ರಕ್ಷನಾಹಿ ನೆರೆಟಿವ್ ಬಿಲ್ಟ್ ಮಾಡಲಾಗಿತ್ತು ಎಂದು ದೂರಿದರು.