ಸುದ್ದಿಲೈವ್/ಶಿವಮೊಗ್ಗ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಠಾಚಾರವನ್ನ ಖಂಡಿಸಿ ಇಂದು ಬಿಜೆಪಿ ಎಸ್ಟಿ ಮೋರ್ಚದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯನ್ನ ಮಾತ್ರ ಖಾಕಿ ಪಡೆ ಬ್ಯಾರಿಕೇಡ್ ನಿಂದ ನಿರ್ಮಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದರು, ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಆತ್ಮಹತ್ಯೆ ನ್ಯಾಯಸಿಗಬೇಕು. ಕುಟುಂಬಕ್ಕೆ ಅನುಕಂಪ ಆಧಾರದ ಕೆಲಸ ನೀಡಬೇಕು. ಆತ್ಮಹತ್ಯೆ ಪ್ರಕರಣ ಸಿಬಿಐ ಗೆ ವಹಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಉಇನ್ನೂ ಉಗ್ರವಾಗಿ ಹೋರಾಡಲಿದೆ ಎಂದರು
ಶಾಸಕ ಚೆನ್ನಬಸಪ್ಪ ಮಾತನಾಡಿ ಗೋಕಟುಕನಿಗೆ ಹಣ ಪರಿಹಾರ ನೀಡುವ ಸರ್ಕಾರ ಮೃತ ಚಂದ್ರಶೇಖರ್ ಅವರ ಕುಟುಂಬಕ್ಕೆ 25 ಲಕ್ಷ ಕೊಡಲು ಈನಮೇಷವೇಕೆ ಎಂದು ಆಕ್ಷೇಪಿಸಿದರು.
ಪ್ರತಿಭಟನೆ ಭಾಷಣ ಮುಗಿಸಿ ಜಿಲ್ಲಾಧಿಕಾರಿ ಕಚೇರಿಯನ್ನಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನ ಪೊಲೀಸರು ತಡೆದು ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿ ಅಧಿಕಾರಿಗಳು ಇದ್ದಾರೆ ಎಂದು ಪೊಲೀಸರು ತಿಳಿಸಿದರು. ಅದಕ್ಕೆ ಕುವೆಂಪು ರಂಗಮಂದಿರಕ್ಕೆ ಹೋಗೋಣವೆಂದು ಶಾಸಕರು ಹೇಳಿದರು. ಎಲ್ಲರೂ ರಂಗಮಂದಿರ ಕಡೆ ಪ್ರತಿಭಟನಾಕಾರರು ನಡೆದರು.
ಗೋಪಿವೃತ್ತದ ಬಳಿ ಬಂದ ಶಾಸಕರು ಮತ್ತು ಸಚಿವರನ್ನ ಪೊಲೀಸರು ತಡೆದು ವಶಕ್ಕೆ ಪಡೆದರೆ, ಕೆಲ ಯುವಕರು ರಂಗಮಂದಿರದ ಗೇಟ್ ಬಳಿ ಡಿಎಸ್ ಎಸ್ ಪ್ರತಿಭಟನೆ ನಡೆಸುತ್ತಿದ್ದರಿಂದ ಗೇಟ್ ಬಂದ್ ಮಾಡಲಾಗಿತ್ತು. ಇದರಿಂದ ಪೊಲೀಸರು ಮುಜುಗರಕ್ಕೊಳಗಾಗುವುದರಿಂದ ಬಜಾವ್ ಆದರು.
ಪೊಲೀಸರ ವೈಫಲ್ಯ?
ಬಿಜೆಪಿ ಪ್ರತಿಭಟನೆಯನ್ನ ಡಿಸಿ ಕಚೇರಿ ಮುಂದೆನೇ ಬಂಧಿಸಲು ಅವಕಾಶವಿದ್ದರೂ ಪೊಲೀಸರು ಕೈಚೆಲ್ಲಿ ಕುಳಿತಿದ್ದು ಅಚ್ಚರಿ ಮೂಡಿಸಿತ್ತು. ಗೋಪಿ ವೃತ್ತದ ಬಳಿ ಬ್ಯಾರಿಕೇಡ್ ಇದ್ದರೂ 10-20 ಜನರನ್ನ ಒಳಗೆ ಬಿಟ್ಟಿದ್ದು ಪೊಲೀಸರ ವೈಫಲ್ಯ ಎದ್ದುತೋರುತ್ತಿತ್ತು. ಡಿಸಿ ಕಚೇರಿ ಮುಂದೆ ಡಿಎಆರ್ ವ್ಯಾನು ಮತ್ತು ಇತರೆ ಬಂದೋಬಸ್ತ್ ಮಾಡಿಕೊಂಡರೂ ಹೈಡ್ರಾಮಾಗೆ ಅವಕಾಶ ಮಾಡಿಕೊಟ್ಟಿದ್ದು ಏಕೆ ಎಂಬುದು ಪ್ರಶ್ನೆ ಪ್ರಶ್ನೆಯಾಗೆ ಉಳಿದಿದೆ.
ಇದನ್ನೂ ಓದಿ-https://suddilive.in/archives/17971