ರಾಜ್ಯ ಉಚ್ಚನ್ಯಾಲಯದ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿ ಸಿಎಸ್ ಷಡಾಕ್ಷರಿ ವರ್ಗಾವಣೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷಾರಿ ಅವರನ್ನ ರಾಜ್ಯ ಉಚ್ಚನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಕಚೇರಿಯಲ್ಲಿ ಖಾಲಿ ಇರುವ ಲೆಕ್ಕಾಧಿಕ್ಷಕರ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರು ಆದೇಶಿಸಿದ್ದಾರೆ.

ನವೆಂಬರ್ 8 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರವನ್ನ ಕೋಲಾರದ ಸಮಾಜ ಕಲ್ಯಾಣದ ಇಲಾಖೆಗೆ ವರ್ಗಾಯಿಸಿ ಆದೇಶಿಸಲಾಗಿತ್ತು. ಇದರ ವಿರುದ್ಧ ಕೆಎಟಿಗೆ ಹೋದ ಪರಿಣಾಮ ಅವರಿಗೆ ಕೊಂಚ ರಿಲೀಫ್ ಸಿಕ್ಕಿತ್ತು.

ರಾಜ್ಯ ಆಡಳಿತ ನ್ಯಾಯ ಮಂಡಳಿ (KSAT) ಅವರ ಅರ್ಜಿಯನ್ನ ಮರುಪರಿಶೀಲಿಸುವಂತೆ ಸೂಚಿಸಿ, ನಾಲ್ಕು ವಾರದೊಳಗೆ ಮರು ಪರಿಶೀಲನೆ ನಡೆಸಬೇಕು ಎಂದು ಆದೇಶಿಸಿತ್ತು. ಈ ಬೆಳವಣಿಗೆ ಜನವರಿ 2024 ರಲ್ಲಿ ನಡೆದಿತ್ತು.ಲೋಕಸಭಾ ಚುನಾವಣೆ ಮತ್ತು ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ತಡವಾಗಿತ್ತು.

ಈಗ ಲೆಕ್ಕಪರಿಶೋಧನ ಮತ್ತು ಲೆಕ್ಕಪರಿಶೀಲ ಇಲಾಖೆ ರಾಜ್ಯ ಉಚ್ಚನ್ಯಾಯಲಯದ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯ ವಿಭಾಗದ ಲೆಕ್ಕಾಧೀಕ್ಷಕರ ಹುದ್ದೆ ಖಾಲಿ ಇದ್ದು ಅಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

ಇದನ್ನೂ ಓದಿ-https://suddilive.in/archives/17271

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close