ಶರಾವತಿ ಹಿನ್ನೀರು ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನೋಡೆಲ್ ಅಧಿಕಾರಿ ನೇಮಕ

ಸುದ್ದಿಲೈವ್/ಶಿವಮೊಗ್ಗ

ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನೋಡಲ್ ಆಫೀಸರ್ ನೇಮಕ ಮಾಡಲಾಗಿದೆ. ತ್ವರಿತವಾಗಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಕ್ಕು ಪತ್ರ ನೀಡಲು ಕಾನೂನು ಸಡಿಲವಾಗಬೇಕಿದೆ. 75 ವರ್ಷದಿಂದ 25 ವರ್ಷ ಸಾಗುವಳಿಗೆ ಇಳಿಕೆ ಮಾಡಬೇಕಿದೆ. ಜೂ. 28 ಕ್ಕೆ ಜನ ಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು.‌

29 ಕ್ಕೆ ಕೆಡಿಪಿ ಸಭೆ ಆಯೋಜನೆ ಮಾಡಲಾಗಿದೆ. ಶಾಲೆಯಲ್ಲಿ ಸರಿಯಾದ ಸಮಯಕ್ಕೆ ಶೂ,ಪಠ್ಯ ಪುಸ್ತಕ ತಲುಪಿದೆ. ಸರ್ಕಾರದಲ್ಲಿ ಹಣ ಇರುವುದರಿಂದಲೇ ಬೇಗ ತಲುಪಿದೆ ಎಂದು ಗ್ಯಾರೆಂಟಿಯಿಂದ ರಾಜ್ಯ ಬೊಕ್ಕಸ ಖಾಲಿ ಎಂಬ ಆರೋಪಕ್ಕೆಸ್ಪಷ್ಟನೆನೀಡಿದರು.

ಅನಧಿಕೃತ ಶಾಲೆಗಳಿಗೆ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದೇವೆ. ಅನಧಿಕೃತ ಶಾಲಾ ಕಾಲೇಜು ನಡೆಸುವವರು ಸಮಸ್ಯೆ ಎದುರಿಸಬೇಕಾಗುತ್ತೆ. ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸರ್ಕಾರದಿಂದಲೇ ನಿಟ್ ಕೋಚಿಂಗ್ ಕೊಡಿಸುತ್ತೇವೆ. ಮಕ್ಕಳ ಕಲಿಕೆಯ ಜವಾಬ್ದಾರಿ ಅಧಿಕಾರಿಗಳು, ಶಿಕ್ಷಕರ ಮೇಲಿದೆ. 4900 ಶಿಕ್ಷಕರ ನೇಮಕಾತಿ ಬಿಜೆಪಿ ಸರ್ಕಾರ ಮಾಡಿದೆ. ಅದರೆ ನಾವು  ಎಂಟು ತಿಂಗಳಲ್ಲಿ 12 ಸಾವಿರ ಶಿಕ್ಷಕರ ನೇಮಕಾತಿ ಆಗಿದೆ ಎಂದು ಆರೋಪಿಸಿದರು.

ಇದು ನಮ್ಮ ಸಾಧನೆ ಹೌದು ಅಲ್ವಾ? ಈ ವರ್ಷ ಮತ್ತೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ. 600 ಶಾಲೆಗಳನ್ನು ಗುರುತಿಸಿ ಕೆಪಿಎಸ್ಸಿ ಶಾಲೆ ಮಾಡಲಾಗುತ್ತಿಧ.ಫಲಿತಾಂಶದಲ್ಲಿ ಬದಲಾವಣೆ ಕಾಣಲು ಸಮಯ ಬೇಕಾಗುತ್ತೆದೆ. ನಿಟ್ ವಿಚಾರದಲ್ಲಿ ನಾವು ವಿರೋಧ ಮಾಡುತ್ತೇವೆ. ನಿಟ್ ಅಕ್ರಮದ ತನಿಖೆ ಆಗಬೇಕಿದೆ ಎಂದರು.

ದರ್ಶನ್ ಬಗ್ಗೆ ಕಾನೂನು ಇದೆ ಕಾನೂನು ನೋಡಿಕೊಳ್ಳುತ್ತೆ.ಯಾರಾದರೇನು ಕಾನೂನು ಇದೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/archives/17401

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close