ಸುದ್ದಿಲೈವ್/ಶಿವಮೊಗ್ಗ
ಚಿಕ್ಕಮಗಳೂರು ಜಿಲ್ಲೆಯ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಮಾರಿದ್ದಬ್ಬದಲ್ಲಿ ಭದ್ರಾ ಹಿನ್ನೀರಿನಲ್ಲಿ ತೆಪ್ಪದಲ್ಲಿ ಹೋಗುತ್ತಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ. ಈಘಟನೆ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ಹಬ್ಬದ ಪ್ರಯುಕ್ತ ನದಿಗೆ ಈಜಲು ಹೋದ ಅಫ್ದಾಖಾನ್ (28), ಸಾಜಿದ್ (22), ಆದಿಲ್(22) ಎಂಬ ಮೂವರು ನದಿಗೆ ಇಳಿದಿದ್ದಾರೆ. ನದಿಗೆ ಇಳಿದ ಯುವಕರು ನೀರುಪಾಲಾಗಿದ್ದಾರೆ. ಅವರಿಗಾಗಿ ಶೋಧಕಾರ್ಯ ನಡೆದಿದೆ. ಇನ್ನೊಂದು ಗಂಟೆಯಲ್ಲಿ ಶೋಧಕಾರ್ಯ ಮುಂದುವರೆಯಲಿದ್ದು ಪತ್ತೆಯಾಗದಿದ್ದರೆ ನಾಳೆ ಬೆಳಿಗ್ಗೆ ಶೋಧಕಾರ್ಯ ಮುಂದು ವರೆಯಲಿದೆ.
ಈ ಮೂವರು ವಿದ್ಯಾನಗರದ ಇಸ್ಲಸಪುರ ಯುವಕರಾಗಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಫ್ದಾಖಾನ್ ಗೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.
ಮೂವರು ಮೋಜು ಮಸ್ತಿಗೆ ನದಿಯಲ್ಲಿ ತೆಪ್ಪಾದಲ್ಲಿ ಹೋಗುತ್ತಿದ್ದರು ಎಂದು ಡಿಜಿಟಲ್ ವಾಜಿನಿಯೊಂದು ಸುದ್ದಿ ಮಾಡಿದೆ. ಕೆಲವರು ಟ್ಯೂಬ್ ಕಟ್ಟಿಕೊಂಡು ನೀರಿಗೆ ಇಳಿದಿದ್ದು ಜೀವ ಸುರಕ್ಷತೆ ಇಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು
ಘಟನೆ ಬಳಿಕ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸ್ಥಳದಲ್ಲಿ ಮೂವರಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಸ್ಥಳದಲ್ಲಿಯೇ ಎನ್ ಆರ್ ಪುರ ಪಿಎಸ್ಐ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ-https://suddilive.in/archives/17276