ಬಸ್ ಸೀಟಿಗಾಗಿ ಮಹಿಳೆಯರ ನಡುವೆ ಫೈಟ್

ಸುದ್ದಿಲೈವ್/ಶಿವಮೊಗ್ಗ

ಸೀಟಿಗಾಗಿ ಮಹಿಳೆಯರ ನಡುವೆ ಫೈಟ್ ಆಗಿದೆ.‌ ಸಾಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ‌ ನಿನ್ನೆ ರಾತ್ರಿ ‌ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗದ‌ ಕಡೆ ಹೊರಟ್ಟಿದ್ದ ಬಸ್ ನಲ್ಲಿ ಮಹಿಳೆಯರ ನಡುವೆ ಬಿಗ್ ಫೈಟ್ ನಡೆದಿದೆ. ಬಸ್ಸಿನಲ್ಲಿ ಸೀಟಿಗಾಗಿ  ಗಲಾಟೆ ನಡೆದಿದೆ.

ಗಲಾಟೆ ಮಾಡದಂತೆ ಸುಮ್ಮನಿರಿ‌ ಎಂದು ಚಾಲಕ, ನಿರ್ವಾಹಕ, ಸಹ ಪ್ರಯಾಣಿಕರು ಹೇಳಿದರೂ ಗಲಾಟೆ ಮುಂದುವರೆದಿದೆ. ಸುಮ್ಮನಿರಿ ಎಂದರೂ ಸುಮ್ಮನಾಗದ ಮಹಿಳೆಯರು ಗಲಾಟೆ ಮಾಡಿದ್ದಾರೆ.‌

ಗಲಾಟೆ ಸುಮ್ಮನಾಗದ ಕಾರಣ ಚಾಲಕ ಬಸ್ಸನ್ನು ನೇರವಾಗಿ ಸಾಗರ ಪಟ್ಟಣ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ. ಪೊಲೀಸ್ ಠಾಣೆ ಬಳಿ ಗಲಾಟೆ ಮಾಡಿದ ಇಬ್ಬರು ಮಹಿಳೆಯರನ್ನು ಬಸ್ಸಿನಿಂದ ಕೆಳಗೆ  ಪೊಲೀಸರು ಕೆಳಗಿಳಿಸಿದ್ದಾರೆ. ನಂತರ ಬಸ್ ಮುಂದೆ ಸಾಗಿದೆ.

ಗಲಾಟೆ ಮಾಡಿದ ಮಹಿಳೆಯರಿಗೆ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದಾರೆ. ಶಕ್ಗಿಯೋಜನೆಯ ನಂತರ ಈ ಗಲಾಟೆ ಬಸ್ ಗಳಲ್ಲಿ ಹೆಚ್ಚಾಗುತ್ತಿರುವುದು ಕಙಡು ಬರುತ್ತಿದೆ.

ಇದನ್ನೂ ಓದಿ-https://suddilive.in/archives/15978

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close