ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಎರಡು ಅಪರಿಚಿತ ವ್ಯಕ್ತಿಗಳ ಶವಪತ್ತೆಯಾಗಿದ್ದು ಈ ಶವಗಳ ಗುರುತಿಗಾಗಿ ಪೊಲೀಸ್ ಇಲಾಖೆ‌ ಪ್ರಕಟಣೆ ಹೊರಡಿಸಿದೆ. ಒಂದು ಆಯನೂರು ಸಂತೆ ಗೋದಾಮಿನಲ್ಲಿ ಅಪರಿಚಿತನ ಶವ ಪತ್ತೆಯಾದರೆ, ರೈಲಿನಲ್ಲಿ ವ್ಯಕ್ತಿಯ ಶವಪತ್ತೆಯಾಗಿದೆ.

ಜೂನ್ 22 ರಂದು ಶಿವಮೊಗ್ಗದ ತಾಲೂಕು ಆಯನೂರು ಸಂತೆ ಗೊದಾಮದ ಶೆಡ್ ಬಳಿ ದುರ್ವಾಸನೆ ಬರುತ್ತಿದ್ದು, ಸಾರ್ವಜನಿಕರೆಲ್ಲಾ ಹೋಗಿ ನೋಡಿದಾಗ ಸುಮಾರು 30-35 ವರ್ಷದ ಪುರುಷ ಮೃತಪಟ್ಟಿರುವುದು ಕಂಡುಬಂದಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮೃತ ವ್ಯಕ್ತಿಯ ಚಹರೆ ಸುಮಾರು 5.2 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಎಡಕಾಲು ಊದಿಕೊಂಡು ಕೊಳೆತು ಹೋಗಿರುತ್ತದೆ. ಮೈಮೇಲೆ ತಿಳಿಹಸಿರು- ಬೂದು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆ 08182-262332/261412/261413 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ರೈಲಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಜೂನ್ 25 ರಂದು ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ನಂ 16567 ರೈಲುಗಾಡಿ ಬಂದಾಗ, ಆ ರೈಲಿನ ಕೋಚ್ ನಂ ಜಿಎಸ್‍ಆರ್‍ಡಿ/ಎಸ್‍ಡಬ್ಲ್ಯುಆರ್/144211 ರಲ್ಲಿ ಸುಮಾರು 65 ವರ್ಷದ ಪುರುಷನ ಶವ ಪತ್ತೆಯಾಗಿದ್ದು, ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಹಾಗೂ ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರಕ್ಕೆ ಸಾಗಿಸಲಾಗಿದೆ.

ಮೃತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೃಶವಾದ ಶರೀರ, ಕಪ್ಪು ಮೈಬಣ್ಣ, ಕೋಲುಮುಖ, ನೀಳ ಮೂಗು, ಸುಮಾರು ಒಂದು ಇಂಚು ಉದ್ದದ ಕಪ್ಪುಬಿಳಿ ಕೂದಲು,ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ತಿಳಿ ನೀಲಿ ಬಣ್ಣದ ಕಾಟನ್ ಚಡ್ಡಿ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್‍ಇನ್ಸಪೆಕ್ಟರ್ ದೂ.ಸಂ: 08182 222974 ಮತ್ತು 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆ ತಿಳಿಸಿದಾರೆ.

ಇದನ್ನೂ ಓದಿ-https://suddilive.in/archives/17825

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close