ಬುದ್ದಿವಾದ ಹೇಳಿದ್ದಕ್ಕೆ ನಡೆಯಿತಾ ಅಜ್ಜಿಯ ಮರ್ಡರ್?

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಅಜ್ಜಿಯೋರ್ವಳನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಭದ್ರಾವತಿಯ ಅರಳಹಳ್ಳಿಯಲ್ಲಿ ಫಸ್ಲುನ್ನೀಸ ಎಂಬ 70 ವರ್ಷದ ವೃದ್ಧೆಯನ್ನ‌ ಮಂಜುನಾಥ್ ಎಂಬುವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕೊಲೆಗೆ ನಿಖರ ಮಾಹಿತಿ ಎಫ್ಐಆರ್ ನಿಂದ ತಿಳಿದು ಬರಲಿದೆ. ಫಸ್ಲುನ್ನೀಸಾ ಎಂಬ ವೃದ್ಧೆ ಪಕ್ಕದ ಮನೆಯ ಗೀತ ಎಂಬುವರ ಮನೆಯ ಆಕಳುಗಳಿಗೆ ಮುಸರೆ ಹಾಕಲು ಹೋದಾಗ ಮಂಜುನಾಥ್ ಮಂಚ್ಚಿನಿಧ ಕೊಲೆ ಮಾಡಿರುವುದು ತಿಳಿದು ಬಂದಿದೆ. ಇದು ಪ್ರಾಥಮಿಕ ಮಹಿತಿಯಾಗಿದೆ.

ಮಂಜುನಾಥ್ (30) ಮತ್ತು ಫಸ್ಲುನ್ನಿಸಾ(70) ಎದುರು ಬದರು ಮನೆಯ ನಿವಾಸಿಯಾಗಿದ್ದಾರೆ. ಫಾಲ್ತುವಾಗಿ ಓಡಾಡುತ್ತಿದ್ದ ಮಂಜುನಾಥ್ ಗೆ ಫಸ್ಲುನ್ನೀಸಾ ಬುದ್ದಿವಾದ ಹೇಳಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿದಿದ್ದಾರೆ.

ಇದನ್ಬೂ ಓದಿ-https://suddilive.in/archives/16140

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close