ಎನ್ ಸಿಸಿ ಕ್ಯಾಂಪ್ ನಲ್ಲಿದ್ದ ಮಕ್ಕಳಲ್ಲಿ ವಾಂತಿ, ಮೆಗ್ಗಾನ್ ಗೆ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಎನ್ ಸಿಸಿ ಕ್ಯಾಂಪ್ ನಲ್ಲಿ ಭಾಗಿಯಾಗಿದ್ದ 9 ಜನರಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು ತಕ್ಷಣಕ್ಕೆ ಸಿಕ್ಕ ಫಲಿತಾಂಶದಿಂದ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಎನ್ ಸಿಸಿ ಕ್ಯಾಂಪ್ ನಡೆದಿದೆ. 400 ಜನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇವರೆಲ್ಲರೂ ಕ್ಯಾಂಪ್ ನಲ್ಲಿ ನೀಡಿದ ಆಹಾರ ಸ್ವೀಕರಿಸಿದ್ದಾರೆ. ಇವರಿಗೆ ಇಬ್ಬರಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.

ಇಬ್ಬರಲ್ಲಿ ವಾಂತಿ ಕಾಣಿಸಿಕೊಂಡಿದ್ದು ಉಳಿದ 7 ಜನ ಮಕ್ಕಳಿಗೆ ವಾಂತಿ ಆಗಿದೆ. ತಕ್ಷಣಕ್ಕೆ ಮೆಗ್ಗಾನ್ ಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸಧ್ಯಕ್ಕೆ ದಾಖಲಾದ ಮಕ್ಕಳಲ್ಲಿ ಆರೋಗ್ಯ ಚೇತರಿಕೆ ಕಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತರೆ ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿಗಳು ಕಂಡು ಬಂದಿವೆ. ಶಿವಮೊಗ್ಗದಲ್ಲಿ ಗಂಭೀರವಾದ ಪ್ರಕರಣಗಳು ದಾಖಲಾಗದಿದ್ದರೂ ಸಧ್ಯಕ್ಕೆ ಮಕ್ಕಳು ಅಸ್ಚಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು ವರ್ಷದ ಮೊದಲ ಪ್ರಕರಣವಾಗಿದೆ.

ಇದನ್ನೂ ಓದಿ-https://suddilive.in/archives/17022

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close