ಸುದ್ದಿಲೈವ್/ಶಿವಮೊಗ್ಗ
ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಅಪರ ಜಿಲ್ಲಾಧಿಕಾರಿ ಹಾಗೂ ಯೋಜಬೆಯ ಸದಸ್ಯ ಕಾರ್ಯದರ್ಶಿ ಸಿದ್ದಲಿಂಗ ರೆಡ್ಡಿ ಮತ್ತು ಜಿಲ್ಲಾ ಗ್ಯಾರೆಂಟಿ ಹ ಮನನ ಯೋಜನೆಯ ಚಂದ್ರ ಭೂಪಾಲ್ ನೇತೃತ್ವದಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ತಾಲೂಕು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರ ಗೈರು ಹಾಜರಾತಿ ಎದ್ದು ಕಾಣುತ್ತಿತ್ತು. ಶಿಕಾರಿಪುರದ ನಾಗರಾಜ ಗೌಡ, ಸಾಗರದ ಜಯಂತ್ ಭದ್ರಾವತಿಯ ಮಣಿಶೇಖರ್ ಸಹ ಸಭೆಗೆ ತಡವಾಗಿ ಬಂದರು. ಇವರ ಜೊತೆಗೆ ಸೊರಬ ಮತ್ತು ತೀರ್ಥಹಳ್ಳಿಯ ಇಒ ಗೈರು ಹಾಜರಿ ಇದ್ದರು.
ಯೋಜನೆಗಳ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಭದ್ರಷ್ಠಾಚಾರ ರಹಿತ ಯೋಜನೆ ಇದಾಗಿದೆ. ಯೋಜನೆ ಸ್ಥಗಿತಗೊಳ್ಳಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಫಲಾನುಭವಿಗಳು ಆತಂಕ ಪಡದಂತೆ ಜಾಗೃತಿ ಮಾಡಬೇಕಿದೆ. ಭ್ರಷ್ಠಾಚಾರವಿಲ್ಲದೆ ಅನುಷ್ಠಾನಗೊಂಡ ಕಾರಣ ದೂರು ಇಲ್ಲ.
ಕೆಲವರಿಗೆ ಇನ್ನೂ ಸಣ್ಣಪುಟ್ಟ ದೋಷದಿಂದ ತಲುಪುತ್ತಿಲ್ಲ. ಅದನ್ನ ಸರಿಪಡಿಸಬೇಕಿದೆ. ಆರ್ಥಿಕ ಶಕ್ತಿ ತುಂಬಿದ ಯೋಜನೆಯಾಗಿದೆ.
ಶಿವಾನಂದ್ ಮಾತನಾಡಿ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಗೆ ಹೋಗಿ ಉತ್ತಮ ಪ್ರತಿಕ್ರಿಯೆ ಇಲ್ಲ. ಭೇಟಿ ನೀಡಿದಾಗ ಅಧಿಕಾರಿಗಳೆ ಉತ್ತಮ ಪ್ರತಿಕ್ರಿಯೆ ಇಲ್ಲ. ಆಹಾರ ಇಲಾಖೆಯಲ್ಲಿಯೂ ಗೊಂದಲವಿದೆ. ಬಡವರನ್ನ ಎಪಿಎಲ್ ಮಾಡಲಾಗಿದೆ. ರಾಜಪ್ಪನವರ ವಿರುದ್ಧ ದೂರಲಾಯಿತು. ವಯಸ್ಸಾದವ ದೂರು ಬಂದಾಗ ಸ್ಪಂಧಿಸಲು ಕೋರಿದರು.