ಸುದ್ದಿಲೈವ್/ಶಿವಮೊಗ್ಗ
ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವುಕಂಡಿದ್ದಾನೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್ ಟಿಸಿ ರಾಜಹಂಸ ಬಸ್ ಗೆ ಊರುಗಡೂರು ವೃತ್ತದ ಬಳಿ ಬೈಕ್ ನಲ್ಲಿ ಬರುತ್ತಿದ್ದ ಸಂತೋಷ್ ಗೆ ಡಿಕ್ಕಿ ಹೊಡೆದಿದೆ. ಸಂತೋಷ್(23) ಕೆಳಗೆ ಬಿದ್ದು ಸ್ಥಳದಲ್ಲೇ ಸಾವುಕಂಡಿದ್ದಾರೆ.
ಶ್ರೀರಾಮ ಪುರದಿಂದ ಊರಗಡೂರಿನ ಬಳಿ ಹೋಟೆಲ್ ಕೆಲಸಕ್ಕೆ ತೆರಳುತ್ತಿದ್ದ ಸಂತೋಷ್ ಗೆ ಕೆಎಸ್ಆರ್ ಟಿಸಿ ಬಸ್ ಜವರಾಯನಂತೆ ಬಂದು ಎರಗಿದೆ.
ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತ ಪಡಿಸಿದ ಕೆಎಸ್ ಆರ್ ಟಿಸಿ ಬಸ್ ನ್ನ ಠಾಣೆಗೆ ತಂದಿರಿಸಲಾಗಿದೆ. ಘಟನೆ ಇಂದು ಬೆಳಿಗ್ಗೆ ಸುಮಾರು 6-30 ರ ಸಮಯದಲ್ಲಿ ಸಂಭವಿಸಿದೆ.
Tags:
ಕ್ರೈಂ ನ್ಯೂಸ್