ಮನೆ ಬೆಂಕಿಗಾಹುತಿ

ಸುದ್ದಿಲೈವ್/ಶಿವಮೊಗ್ಗ

ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಮನೆಯೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಯಾಜ್ ನಗರ ೬ನೇ ತಿರುವಿನಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿಗೆ ಸಂಪೂರ್ಣವಾಗಿ ಮನೆ ಮನೆಯ ವಸ್ತುಗಳು ಪೀಠೋಪಕರಣಗಳು ಭಸ್ಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯ ನಷ್ಟ ಉಂಟಾಗಿದೆ. ಬೆಂಕಿಗಾಹುತಿಯಾದ ಮನೆ ಮುಸ್ಲಿಂ ಬೇಗ್ ಎಂಬುವರಿಗೆ ಸೇರಿದ್ದಾಗಿದೆ,

ಬಕ್ರೀದ್ ಹಬ್ಬಕ್ಕಾಗಿ ಅಣ್ಣನ ಮನೆಗೆ ಹೋದ ಸಂಧರ್ಭದಲ್ಲಿ ಅವಘಡ ಸಂಭವಿಸಿದೆ. ಇವರು ಪೇಂಟರ್ ಕೆಲಸ ಮಾಡುತ್ತಿದ್ದು, ತಕ್ಷಣ ನೆರವಿನ ಅವಶ್ಯಕತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಇಲಾಖೆ ಮಹಾನಗರ ಪಾಲಿಕೆ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕೆಂದು ಶಿವಮೊಗ್ಗ ಪೀಸ್ ರ‍್ಗನೈಸೇಷನ್ ಪ್ರಕಟಣೆ ಮೂಲಕ ಒತ್ತಾಯಿಸಿದೆ.

ಇದನ್ನೂ ಓದಿ-https://suddilive.in/archives/17187

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close