ಸುದ್ದಿಲೈವ್/ಶಿವಮೊಗ್ಗ
ಹಿಂದೂ ನಾಯಕ ಶರಣ್ ಪಂಪುವೆಲ್ ವಿರುದ್ಧ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಜಿಲ್ಲಾ ಅಧ್ಯಕ್ಷ ವಾಸುದೇವ ಅವರ ನೇತೃತ್ವದಲ್ಲಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಲು ಮತ್ತು. ಎಫ್ ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಯ ಅಮಾನತು ರದ್ದುಪಡಿಸಲು ಆಗ್ರಹಿಸಲಾಗಿದೆ.
ಕಳೆದ ವಾರ ಮಂಗಳೂರು ಕಂಕನಾಡಿ ಬಳಿಯ ಮಸೀದಿಯ ಎದುರು ರಸ್ತೆಯಲ್ಲಿ ಕೆಲವರು ಅನುಮತಿ ರಹಿತವಾಗಿ ನಮಾಜ್ ಮಾಡಿದ್ದರು. ಪೊಲೀಸರು ಇದನ್ನು ಗಮನಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದರು.
ಆದರೆ ಮಾಧ್ಯಮದಲ್ಲಿ ಪ್ರಕಟವಾದಂತೆ ಕಾಂಗ್ರೆಸ್ ಪಕ್ಷದ ಹಾಗೂ ಮುಸ್ಲಿಂ ಸಂಘಟನೆಯ ಒತ್ತಡದ ಮೇರೆಗೆ ಆ ಪ್ರಕರಣವನ್ನು ಬಿ ರಿಪೋರ್ಟ್ ಹಾಕಿ ಪೊಲೀಸರು ಹಿಂದೆ ಪಡೆದಿದ್ದಾರೆ. ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಸ್ಥಳೀಯ ಪೊಲೀಸರು ನ್ಯಾಯಯುತವಾಗಿ ಪ್ರಕರಣ ದಾಖಲಿಸಿದ್ದಕ್ಕಾಗಿ ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
(ಕಾಂಗ್ರೆಸ್ ಪಕ್ಷದ ನಿಯೋಗ ಹಾಗೂ ಮುಸ್ಲಿಂ ಸಂಘಟನೆಯ ನಿಯೋಗ ಪೊಲೀಸರಿಗೆ ಒತ್ತಡ ಹಾಕಿದ ಬಗ್ಗೆ ಮಾಧ್ಯಮದಲ್ಲಿ ಪ್ರತ್ಯೇಕ ವರದಿಯಾಗಿರುತ್ತದೆ.)
ಮಂಗಳೂರಿನ ಜೆರೊಸಾ ಶಾಲೆಯ ಎದುರು ಅನುಮತಿ ಇಲ್ಲದೆ ಜೈಶ್ರೀರಾಮ್ ಹೇಳಿದಕ್ಕೆ ಕೆಲವು ತಿಂಗಳ ಹಿಂದೆ ಪ್ರಕರಣ ದಾಖಲಾಗಿತ್ತು, ಈ ವರೆಗೆ ಬಿ ರಿಪೋರ್ಟ್ ಹಾಕಿರುವುದಿಲ್ಲ. ಅನುಮತಿ ರಹಿತ ಜೈಶ್ರೀರಾಮ್ ಹೇಳಿದಕ್ಕೆ ಪ್ರಕರಣ ದಾಖಲಿಸುವುದು ಹಾಗೂ ಅನುಮತಿ ರಹಿತ ನಮಾಜ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದರೂ ಒತ್ತಡದ ಮೇರೆಗೆ ಯಾವುದೇ ತನಿಖೆ ನಡೆಸದೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ಹೇಳಿದ ತಕ್ಷಣ ಬಿ ರಿಪೋರ್ಟ್ ಹಾಕಿ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಯನ್ನು ಅಮಾನತುಗೊಳಿಸುರುವುದು ಧರ್ಮ ವಿಚಾರದಲ್ಲಿ ತಾರತಮ್ಯ ನಡೆಸಲಾಗಿದೆ.
ಪ್ರಕರಣದಲ್ಲಿ ಹಾಕಿದ ಬಿ ರಿಪೋರ್ಟ್ ನ್ನು ರದ್ದು ಪಡಿಸಿ ಪ್ರಕರಣವನ್ನು ಮುಂದುವರಿಸಿ ಅನುಮತಿ ಇಲ್ಲದೆ ನಮಾಜು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಮುಂದೆ ಅನುಮತಿ ಇಲ್ಲದೆ ಎಲ್ಲೂ ನಮಾಜ್ ಮಾಡದಂತೆ ಕ್ರಮಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಯ ಅಮಾನತು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ-https://suddilive.in/archives/15973