ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ಯಾಕೆ? ಪ್ರಭಾಕರ್ ಕಲ್ಲಡ್ಕ ಭಟ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ:

ಸಂವಿಧಾನ‌ ಪವಿತ್ರದ ರಥ ನಾನು ಇಲ್ಲಿಯವರೆಗೆ ಎಳೆದುಕೊಂಡು ಬಂದಿದಿದ್ದೇನೆ.ಅದನ್ನು‌ಮುಂದಕ್ಕೆ ತಳ್ಳಿ ಹಿಂದಕ್ಕೆ ಬೇಡ ಅಂದಿದ್ದರು ಅಂಬೇಡ್ಕರ್. ಆದರೆ ಕಾಂಗ್ರೆಸ್ ನವರು ಮಾಡಿದ್ದು ಏನು? ರಥ ಹಿಂದಕ್ಕ ಚಲಿಸುಂತೆ ಮಾಡಿದರು ಎಂದು ತುರ್ತುಪರಿಸ್ಥಿತಿ ಕುರಿತು ಆರ್ ಎಸ್ ಎಸ್ ನ ಮುಖಂಡ ಪ್ರಭಾಕರ್‌ಕಲ್ಲಡ್ಕ ಭಟ್ ತಿಳಿಸಿದರು.

ಗೋಪಾಳದ ಭಂಟರ ಭವನದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್  ಸಾಮಾಜಿಕ ನ್ಯಾಯಕ್ಕಾಗಿ ನಘರೀಕರು ತುರ್ತುಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಮಾನ ಕುರಿತು ಮಾತನಾಡಿ, 1975ರಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷ ಮಾಡಿ ಗೆದ್ದಿದ್ದರಿಂದ ಮತ್ತು ವ್ಯಕ್ತಿಯೋರ್ವನ ಸುತ್ತ ನಡೆದ ಚುನಾವಣೆಯಿಂದ ಕಾಂಗ್ರೆಸ್ ನ ಇಂದಿರಾಗಾಂಧಿ ಗೆದ್ದಿದ್ದರು ಎಂದರು.

ಆರಂಭದಲ್ಲಿ ಅಧಿಕಾರದ ಲಾಲಸೆಗಾಗಿ ದೇಶ ವಿಭಜನೆ‌ಆಯಿತು.‌ನೆಹರು ಪ್ರಧಾನಿ ಮಾಡಿದರು. ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟರು. 43000 ಚದುರ ಕೀಲೋಮೀಟರ್ ಚೀನಾಕ್ಕೆ ಭೂಮಿ ಬಿಟ್ಟರು.

ಶಾಸ್ತ್ರಿ ಪ್ರಧಾನಿ ಆದರೂ ಒಂದೂವರೆ ವರ್ಷದಲ್ಲಿ ನಿಧನರಾದರು. ಇಂದಿರಾಗಾಂಧಿ ಫೀರೋಜ್ ಗ್ಯಾಂಡಿಯನ್ನು‌ಮದುವೆ ಆದರು. ಯಾವುದೋ ಮನೆತನವನ್ನ ಗಾಂಧಿಗೆ ಹೋಲಿಕೆ ಮಾಡಲಾಯಿತು. ಗಾಂಧಿ ವಂಶಸ್ಥರೆಂದು ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದರು.

ಕೋಟ್೯ ನಲ್ಲಿ ಪ್ರಧಾನಿ ವಿರುದ್ದ ಜೂನ್ 12 1975ರಲ್ಲಿ ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಆದೇಶ ಹೊರಬಿತ್ತು. ದೊಡ್ಡ ರೀತಿಯಲ್ಲಿ ತೀರ್ಪು ಬಂದಾಗ ಇಂದಿರಾ ಗಾಂಧಿ ರಾಜೀನಾಮೆ‌ ಕೊಡಲಿಲ್ಲ. ಉಳಿಯಲು ಪ್ರಯತ್ನ ನಡೆಸಿದರು. ಭಾರಿ ವಿರೋಧ ಆಂದೋಲನ‌ ನಡೆಯಿತು. ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಹೋರಾಟ ನಡೆಯಿತು ಎಂದು ವಿವರಿಸಿದರು.

ಮಾನ,‌ಮರ್ಯಾದೆ ಗೌರವ ಇದ್ದಿದ್ದರೆ ಅಧಿಕಾರದಿಂದ ಇಳಿಯಬೇಕಿತ್ತು.  ಆಂತರಿಕ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಸಂವಿಧಾನದಲ್ಲಜ ಅವಕಾಶವಿತ್ತು.. ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಇದನ್ನು ರಾತ್ರೋರಾತ್ರಿ ದೇಶದ ಮೇಲೆ ಹೇರಿದರು.
ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಸಹಿ ಹಾಕಿದರು. ಪತ್ರಿಕೆಗಳನ್ನು ಬಂದ್ ಮಾಡಿಸಿದರು ಎಂದರು.

567ಕ್ಕೂ ಅಧಿಕ ಮಹಾನ್ ನಾಯಕರನ್ನು ಬಂಧಿಸಿದರು. ಸಾವಿರಾರು ಜನರನ್ನು ಬಂಧಿಸಿದರು. ನಾಯಕರು‌ ಕೆಲವರು ಭೂಗತರಾದರು. ಇಡೀ ದೇಶ ಸ್ಥಬ್ದವಾಯಿತು ಎಂದರು.

ಇದನ್ನೂ ಓದಿ-https://suddilive.in/archives/17774

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close