ಸುದ್ದಿಲೈವ್/ಶಿವಮೊಗ್ಗ
ಮಹಾನಗರ ಪಾಲಿಕೆ ವತಿಯಿಂದ ಬೀದಿದೀಪಗಳ ಕಂಬಗಳ ನಿರ್ವಹಣೆಯ ಬಗ್ಗೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಇದು ಸಹ ಸ್ಮಾರ್ಟ್ ಸಿಟಿ ಯೋಜನೆ ಅಡಿ ಬೀದಿ ದೀಪಗಳನ್ನ ಅಳವಡಿಸಿದರೂ ಅದರ ನಿರ್ವಾಹಣೆಯು ಮರಿಚಿಕೆಯಾದ ಕಾರಣ ಜೀವ ತೆಗೆಯಲು ಹವಣಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಆಯನೂರು ಗೇಟಿನ ಬಳಿಯ ರಸ್ತೆ ಬದಿಯಲ್ಲಿ ಸ್ಟ್ರೀಟ್ ಲೈಟ್ ಗಳು ಹಾಕಲಾಗಿದೆ. ಅದರಿಂದ ಜನರಿಗೆ ಅನುಕೂಲ ಆದರೂ ಸರಿಯಾದ ನಿರ್ವಹಣೆ ಇಲ್ಲದೆ ಅಮಾಯಕರ ಜೀವ ಬಲಿ ಪಡೆಯಲು ಕೂತಂತಿದೆ ಎಂದು ಆರೋಪಿಸಿದ್ದಾರೆ.
ಈ ಚಿತ್ರದಲ್ಲಿ ಕಾಣಿಸುವ ಕಂಬದ ವಯರ್ ಗಳು ಹೊರಚಾಚಿವೆ. ಪುಟ್ ಬಾತ್ ಮೇಲೆ ಶಾಲಾ ಮಕ್ಕಳು ವೃದ್ಧರು ಕೆಲಸಕ್ಕೆ ಹೋಗುವರು ದಿನನಿತ್ಯ ಓಡಾಟ ನಡಾಡುತ್ತಾರೆ. ಮಳೆಗಾಲ ಶುರುವಾಗಿದೆ. ಯಾವುದೇ ತೊಂದರೆ ಆಗೋಕಿಂತ ಮುಂಚೆ ಪಾಲಿಕೆ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಗ್ಯಾರೆಂಟಿ ಎಂದು ಎಪಿಎಂಸಿಯ ಲಗೇಜ್ ಆಟೋ ಚಾಲಕ ಸುದ್ದಿಲೈವ್ ನಲ್ಲಿ ದೂರಿದ್ದಾರೆ.
ಇದನ್ನೂ ಓದಿ-https://suddilive.in/archives/16792