ನಾಳೆ ದೆಹಲಿಗೆ ಶಾಸಕಿ ಶಾರದ ಪೂರ್ಯನಾಯ್ಕ್ !

ಸುದ್ದಿಲೈವ್/ಶಿವಮೊಗ್ಗ

ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ನಡೆಯಲಿದೆ. ಮೂರನೇ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುತ್ತಿದ್ದು ಅದರ ಬೆನ್ನಲ್ ಎನ್ ಡಿ ಎ ಸದಸ್ಯರಾದ ಜೆಡಿಎಸ್ ನ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರ ಸ್ವಾಮಿ ಅವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬೆನ್ನಲ್ಲೇ ಶಿವಮೊಗ್ಗದಿಂದ ಯಾರೆಲ್ಲಾ ದೆಹಲಿಗೆ ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿತ್ತು. ಬಿಎಸ್ ವೈ ಹೋಗುವುದು ಖಚಿತತೆಯಾದರೂ ಉಳಿದವರು ಯಾರು ಹೋಗಲಿದ್ದಾರೆ ಎಂಬ‌ಕುತೂಹಲ ಹೆಚ್ಚಾಗಿತ್ತು.

ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಹಾಗೂ ವಿಪಕ್ಷ ನಾಯಕಿ ಆಗಿರುವ ಶಾರದ ಪೂರ್ಯನಾಯ್ಕ್ ಮತ್ತು ಅವರ ಪುತ್ರ ದೀಪಕ್ ಪೂರ್ಯನಾಯ್ಕ್ ದೆಹಲಿಗೆ ತೆರಳುತ್ತಿರುವುದಾಗಿ ಅವರ ಆಪ್ತವಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-https://suddilive.in/archives/16509

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close