ಶಿವಮೊಗ್ಗದಲ್ಲಿ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸಾವರ್ ಲೈನ್ ರಸ್ತೆಯಲ್ಲಿ ಆಲ್ಟರ್ನೇಟಿವ್ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಸಾರ್ವಜನಿಕರು ಎಲ್ಲಂದರೆಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರಿ ಪೊಲೀಸ್ ಇಲಾಖೆ ಹೊಸ ಪಾರ್ಕಿಂಗ್ ವ್ಯವಸ್ಥೆಗೆ ಕೈಹಾಕಿದೆ.

ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರಿಂದ ಸಂಚಾರಿ ಕಿರಿಕಿರಿ ಉಂಟಾಗುತ್ತಿತ್ತು.‌ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾವರ್ ಲೈನ್ ರಸ್ತೆಯಲ್ಲಿರುವ ಮಾಲ್ಗುಡಿ ಡೇಸ್ ಕೆಫೆ ಪಕ್ಕದಲ್ಲಿದ್ದ ಜಾಗದಲ್ಲಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಸಂಚಾರ ವ್ಯವಸ್ಥೆ ಈಗ ವ್ಯವಸ್ಥಿತವಾಗಿದೆ ಎಂದು ಹೇಳಲಾದರೂ ಶಿವಮೊಗ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಗಮವಾಗದೆ ಇರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ನಂಜಪ್ಪ ರಸ್ತೆ, ಶಿವಮೊಪ್ಪ ನಾಯಕ ವೃತ್ತದಿಂದ ವೀರಶೈವ ಕಲ್ಯಾಣ ಮಂದಿರ ರಸ್ತೆ, ಕುವೆಂಪು ರಸ್ತೆ, ದುರ್ಗಿಗುಡಿಯ ರಸ್ತೆಹೀಗೆ ಪಟ್ಟಿ ಮಾಡುದ್ರೆ ಪಟ್ಟಿಗಳ ಸಂಖ್ಯೆನೂ ಕೂಡ ಹೆಚ್ಚಾಗಲಿದೆ.

ನೆಹರೂ ರಸ್ತೆಯಲ್ಲಿರುವ ಬಹುತೇಕ ಅಂಗಡಿಗಳು ಅಂಗಡಿ ಮುಂದೆ ಗೊಂಬೆಗಳನ್ನ ಇಡುವ ಮೂಲಕ ಫುಟ್ ಪಾತ್ ಇಲ್ಲದಂತಾಗಿದೆ.  ಗಾಂಧಿ ಬಜಾರ್ ನಲ್ಲೂ ಈ ಸಮಸ್ಯೆ ಕಂಡು ಬಂದಿದೆ. ಫುಟ್ ಪಾತ್ ಗಳನ್ನ ವ್ಯಾಪಾರಕ್ಕೆ ಬಳಸುವುದರಿಂದ ಜನ ಸಾಮಾನ್ಯರಿಗೆ ನಡೆದಾಡಲು ಮತ್ತು ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿವೆ.

ಈ ಎಲ್ಲಾ ಸಮಸ್ಯೆಗಳು ಇದ್ದರೂ ಹೊಸ ಪಾರ್ಕಿಂಗ್ ವ್ಯವಸ್ಥೆ ಅನುಕೂಲವಾಗಲಿದೆ ಎಂದು ಸಂಚಾರಿ ಪೊಲೀಸರು ಸ್ಪಷ್ಟನೆ ನೀಡಿದೆ. ಕೆಲ ಆಸ್ಪತ್ರೆ ರಸ್ತೆಗಳು ಇಕ್ಕಟ್ಟಾಗಿವೆ. ಈ ಹಿಂದೆ ಪಾಲಿಕೆ ಆಯುಕ್ತೆ ಚಾರುಲತಾ ಅವರ ಖಡಕ್ ಫುಟ್ ಪಾತ್ ಆಪರೇಷನ್ ಗೆ ಕೈ ಹಾಕಿದರೂ ಬಂಡವಾಳ ಶಾಹಿಗಳ ಎದುರು ಆಪರೇಷನ್ ಅರ್ಧಕ್ಕೆ ನಿಂತಿತ್ತು.  ನಂತರ ಬಂದ ಅಧಿಕಾರಿಗಳಿಂದ ಆ ಕೆಲಸವಾಗದ ಕಾರಣ ಶಿವಮೊಗ್ಗದಲ್ಲಿ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಮುಂದುವರೆದಿದೆ.

ಇದಕ್ಕೆಲ್ಲಾ ಉತ್ತರ ಯಾವಾಗ? ಸಾವರ್ ಲೈನ್ ರಸ್ತೆಯಲ್ಲಿರುವ ಮಾಲ್ಗುಡಿ ಡೇಸ್ ಪಕ್ಕದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಸಾರ್ವಜನಿಕರು ಪಶ್ಚಿಮ ಸಂಚಾರಿ ಪೊಲೀಸ್ರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುವುದಾದರೆ ಈ ಅವ್ಯವಸ್ಥೆಗಳಿಗೆ ಯಾರು ಜವಬ್ದಾರರು?

ಇದನ್ನೂ ಓದಿ-https://suddilive.in/archives/17124

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close