ಬಿಜಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಮಹಿಳೆ ಮಿಸ್ಸಿಂಗ್

ಸುದ್ದಿಲೈವ್/ಶಿವಮೊಗ್ಗ

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ಜೂ.02 ರಿಂದ ಕಾಣೆಯಾಗಿದ್ದಾರೆ.

ತನ್ನ ಮನೆಯಿಂದ ಜೂನ್ 02 ರಂದು ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಫೋನ್ ಸ್ವಿಚ್‍ಆಪ್ ಆಗಿರುತ್ತದೆ.
ಈಕೆಯ ಚಹರೆ 5.02 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.

ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದಮ್ನೂ ಓದಿ-https://suddilive.in/archives/16431

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close