ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಹಾವೇರಿ ಜಿಲ್ಲೆ ಗುಂಡೇರಿ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆ ಹಟ್ಟಿ ಗ್ರಾಮದ 13 ಜನ ಸಾವನ್ನಪ್ಪಿದದ್ದಾರೆ
ಅಪಘಾತದಲ್ಲಿ ಮೃತರಾದ ಆದರ್ಶ, ನಾಗೇಶ, ವಿಶಾಲಾಕ್ಷಿ ಬಾಯಿ, ಅರ್ಪಿತಾ ಸುಭದ್ರರವರ ಮನೆಗೆ ಮತ್ತು ಭಾಗ್ಯಮ್ಮ, ಮಾನಸಾರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಎರಡೂ ಮನೆಗಳು ಹೆಂಚಿನವು ಆಗಿವೆ. ಸಗಣಿ ನೆಲವಾಗಿದೆ. ಎರಡೂ ಕುಟುಂಬಗಳ ಆರ್ಥಿಕ ಸ್ಥಿತಿ ಅಷ್ಟಕ್ಕೆ ಅಷ್ಟೆ.
ನಂತರ ಗ್ರಾಮಸ್ಥರ ಬಳಿ ಮಾತನಾಡಿದ ಸಚಿವರು, ನಿನ್ನೆ ಬರಲಿಕ್ಕೆ ಆಗಲಿಲ್ಲ.ಹೊಸಗಾಡಿ ತೆಗೆದುಕೊಂಡ ಹಿನ್ನಲೆಯಲ್ಲಿ ದೇವರ ದರ್ಶನಕ್ಕೆ ಹೋದಾಗ ರಸ್ತೆ ಅಪಘಾತವಾಗಿದೆ. ಮೃತ ಮಾನಸ ಐಎಎಸ್ ಮಾಡಬೇಕಿದ್ದವಳು ಸಾವನ್ನಪ್ಪಿದ್ದಾಳೆ.
ಅವರ ತಂದೆ ಶರಣೋಜಿಗೆ ಸರ್ಕಾರದ ವತಿತಿಂದ ಕೆಲಸ ಕೂಡಿದ ವ ಗ್ಯಾರೆಂಟಿಯನ್ನ ಸಚಿವರು ಮಾಡಿದರು. ಭದ್ರಾವತಿ ಶಾಸಕ ಸಂಗಮೇಶ್ವರ್ ನಿನ್ನೆ ಬಂದಿದ್ದಾರೆ. ಸರ್ಕಾರ ಘೋಷಣೆಮಾಡಿರುವ ಪರಿಹಾರದ ಹಣ ಹೆಚ್ಚಿಸುವೆ. ಎರಡು ಲಕ್ಷ ರೂ. ಘೋಷಣೆ ಆಗಿದೆ ಅದನ್ನ ಹೆಚ್ಚಿಸುವೆ ಎಂದರು.
ಗೀತ ಮತ್ತು ನಟ ಶಿವರಾಜ್ ಕುಮಾರ್ ಮೃತರ ಕುಟುಂಬಕ್ಕೆ ತಲಾ ಒಂದು ತಲ ಒಂದು ಲಕ್ಷ ರೂ. ನೀಡಲಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಲ್ಲಿ ಒಬ್ಬರು ಹುಬ್ಬಳ್ಳಿ, ಮೂವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಸಹಕಾರ ಮಾಡಲಾಗುವುದು ಎಂದರು.
ಗ್ರಾಮಸ್ಥರ ಒತ್ತಡಕ್ಕೆ ಮಣಿಯದ ಸಚಿವರು
ಈ ನಡುವೆ ಗ್ರಾಮಸ್ಥರು ಗೀತ ಮತ್ತು ನಟ ಶಿವರಾಜ್ ಕುಮಾರ್ ಅವರು ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ತಮ್ಮಿಂದ ಘೋಷಣೆಯಾಗಿಲ್ಲ. ಮಾಡಿ ಎಂದರು. ಆದರೆ ನಾನು ಏನು ಮಾಡಬೇಕು ಮಾಡುತ್ತೇನೆ. ಗ್ರಾಮಸ್ಥರು ಸೇರಿ ಪರಿಅರ ನೀಡುವಂತೆ ಹೇಳಿ ನುಣಚಿಕೊಂಡರು
ಇದನ್ನೂ ಓದಿ-https://suddilive.in/archives/18076