ಸುದ್ದಿಲೈವ್/ಶಿವಮೊಗ್ವ
ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ರಾಷ್ಟ್ರಭಕ್ತರ ಬಳಗದ ಮಹಾಲಿಂಗ ಶಾಸ್ತ್ರಿ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಮಹಾಲಿಂಗ ಶಾಸ್ತ್ರಿಗಳು, ಇಂಡಿಪೆಙಡೆಂಟ್ ಆಗಿ ಸ್ಪರ್ಧಿಸಿದ ನನ್ನ ಗೆಲುವಿಗೆ ಮಾಧ್ಯಮದ ಸಹಕಾರವಿತ್ತು. ಹಾಗಾಗಿ ಗೆಲವಾಗಿದೆ. ಹಾಲು ಉತ್ಪಾ್ಕರ, ಹೌಸಿಂಗ್ ಸಹಕಾರ ಸಂಘ ಎಲ್ಲರೂ ಬೆನ್ನುತಟ್ಟಿ ಸ್ಪರ್ಧೆಗೆ ಪ್ರೋತ್ಸಹಿಸಿದ್ದಾರೆ ಎಂದರು.
ರಾಷ್ಟ್ರಭಕ್ತರ ಬಳಗದ ಅಧ್ಯಕ್ಷರಾದ ಕೆ.ಎಸ್ ಈಶ್ವರಪಗಪನವರು ಬೆನ್ನಿಗೆ ನಿಂತಿದ್ದರು. ಹಾಗಾಗಿ ಗೆಲುವಾಗಿ ಅವರಿಗೆ ನನ್ನ ಮೊದಲ ನಮಸ್ಕಾರವೆಂದ ಶಾಸ್ತ್ರಿಗಳು, ಮತ್ತೆ ಎಲ್ಲಾರನ್ನ ಸಂಪರ್ಕಿಸಿ ಧನ್ಯವಾದಗಳನ್ನ ತಿಳಿಸುವೆ ಎಂದರು
ಬ್ಯಾಂಕ್ ಸಾಲದಲ್ಲಿ ಶಿಫಾರಸು ಇದ್ದರೆಸಾಲ ಸಿಗುವ ವ್ಯವಸ್ಥೆ ಇದೆ. ಇದನ್ನ ಸರಳೀಕರಣಗೊಳಿಸುವೆ. ನೇಮಕಾತಿಯಲ್ಲಿ ಹಗರಣದ ಚರ್ಚೆ ಇದೆ. ಅದರ ಬಗ್ಗೆ ಮೊದಲು ತಿಳಿದು ನಂತರ ಅದರ ಬಗ್ಗೆ ನಿಲುವು ತೆಗೆದುಕೊಳ್ಳುವೆ. 3 ತಾಲೂಕು, 138 ಮತಗಳಿರುವ ನನ್ನ ಮತಕ್ಷೇತ್ರದಲ್ಲಿ ನಾನು ಗೆದ್ದಿರುವೆ. ಜ್ವಲಂತ ಸನಸ್ಯೆ ಇದೆ. ಅಭ್ಯಾಸಿಸಿ ಕ್ರಮ ಜರುಗಿಸುವೆ ಎಂದರು.
ಆಕಸ್ಮಿಕವಾಗಿ ಸ್ಪರ್ಧಿಸಿದ್ದೆ ಗೆದ್ದಿರುವೆ. ಸಾಲಗಳನ್ನ ಮೊದಲು ಡಿಸಿಸಿ ಬ್ಯಾಂಕ್ ನಲ್ಲಿ ತಿರಸ್ಕರಿಸಲಾಗಿತ್ತು. ಇದೊಂದೇ ಕಾರಣಕ್ಕೆ ಸ್ಪರ್ಧಿಸಿಲ್ಲ. ಆದರೆ ಇದರಂತೆ ಬೇರೆ ಸಮಸ್ಯೆಗಳಿವೆ. ಹಾಗಾಗಿ ಸ್ಪರ್ಧಿಸಿರುವೆ. ಯಾರು ಒಳ್ಳೆ ಕೆಲಸ ಮಾಡುತ್ತಾರೋ ಆ ಕಡೆ ಬೆಂಬಲಿಸುವೆ ಎಂದರು.
ಇದನ್ನೂ ಓದಿ-https://suddilive.in/archives/18035