ಕಂಬದ ಮೇಲೆ ಕುಳಿತ ಪವರ್ ಮ್ಯಾನ್ ಗೆ ಶಾಕ್

ಸುದ್ದಿಲೈವ್/ಶಿವಮೊಗ್ಗ

ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಗುತ್ತಿಗೆ ಆಧಾರದ ಮೇಲೆ ಕೆಪಿಟಿಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಪವರ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್ ಗೆ ಬೆನ್ನಿನ ಮೇಲೆ ಪ್ರಬಲವಾಗಿ ಗಾಯವಾಗಿದೆ.

ಅಧಿಕಾರಿಗಳ ಆಟದಿಂದಾಗಿ ಕೆಲಸಗಾರರಿಗೆ ಪ್ರಾಣ ಸಂಕಟ ಉಂಟಾಗಿದೆ. ಸ್ಥಳದಲ್ಲಿ ಬ್ಯಾಕೋಡ್ ಮೆಸ್ಕಾಂ ಜೆಇ ಇರುವಾಗ್ಲೇ ಈ ಅವಘಢ ಸಂಭವಿಸಿದೆ. ಇದು ಕುತೂಹಲ ಮೂಡಿಸಿದೆ. ಕೆಪಿಟಿಸಿಎಲ್ ಅಧಿಕಾರಿಗಳ ಎದುರೆ ನಡೆದಿರುವ ಘಟನೆ ಕುತೂಹಲ ಮೂಡಿಸಿದೆ.

ಬ್ಯಾಕೋಡು ಮೆಸ್ಕಾಂ ಜೆಇ ನಿರ್ಲಕ್ಷ್ಯಕ್ಕೆ ಸಿಬ್ಬಂದಿ ವಾಸು ಅವರಿಗೆ ಗಂಭೀರ ಗಾಯಗೊಂಡಿದ್ದಾರೆ. ವಿದ್ಯುತ್ ಶಾಕ್ ನಿಂದ ವಾಸು ಎನ್ನುವವರ ಪರಿಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ ಹೊಸನಗರ ತಾ. ಬೈಸೆ ಸಮೀಪ ನಡೆದ ಅವಘಢ ಇದಾಗಿದೆ.

ವಿದ್ಯುತ್ ತಂತಿಗೆ ತಗುಲಿರುವ ಮರಗಳ ರೆಂಬೆ ತೆರವು ಮಾಡಿಸುತ್ತಿದ್ದಾಗ ಈ ಘಟನೆ ಸಙಭವಿಸಿದೆ. ಬೈಸೆಯಲ್ಲಿ ಮರ ಕಟ್ಟಿಂಗ್ ಗೆ ಬ್ಯಾಕೋಡಲ್ಲಿ ಜೆಇ ಗಣೇಶ್ ಚಾರ್ಜ್ ತೆಗಿಸಿದ್ದರು.

ಎಲ್ ಸಿ ನಂಬರ್  ಕೊಟ್ಟು  ಮರ ಕಟ್ ಮಾಡೋಕ್ಕೆ ಹೇಳಲಾಗಿತ್ತು. ಈ ಬಗ್ಗೆ ಸರಿಯಾದ ಇನ್ಫಾರ್ಮೇಷನ್ ಇಲ್ದೇ ಲೈನ್ ಚಾರ್ಜ್ ಮಾಡಿದ ಪರಿಣಾಮ ಬ್ಯಾಕೋಡ್ ಸಿಬ್ಬಂದಿ ಮರ ತೆರವುಗೊಳಿಸಲು ಜೆಇ ಗಣೇಶ್ ಎಲ್ ಸಿ ನಂಬರ್ ನೀಡಿದ್ದರು. ಅದ್ರೆ ಮರ ತೆರವುಗೊಳಿಸುತ್ತಿರುವಂತೆ ಸಿಬ್ವಂದಿ ಲೈನ್ ಚಾರ್ಜ್ ಮಾಡಿದ್ದರು.

ಅಂದ್ರೆ ಎಲ್ ಸಿ ನಂಬರ್ ಕೆಲಸಗಾರರಿಗೆ ಕೊಟ್ಟು ಬ್ಯಾಕೋಡು ಸಿಬ್ಬಂದಿಗಳಿಗೆ ಹೇಳಿರಲಿಲ್ವಾ..? ಎಂಬ ಪ್ರಶ್ನೆ ಉದ್ಭವಿಸಿದೆ. ಸಿಬ್ಬಂದಿ ಲೈನ್ ಚಾರ್ಜ್ ಮಾಡಿದ ವೇಳೆ ವಾಸು ಅವರಿಗೆ  ವಿದ್ಯುತ್ ಶಾಕ್ ತಗುಲಿದೆ. ಈ ವೇಳೆ ಜೆಇ ಗಣೇಶ್ ಸ್ಥಳದಲ್ಲಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್ ಸಿ ನಂಬರ್ ಕೊಟ್ಟ ನಙತರವೂ ಸಿಬ್ಬಂದಿ ಚಾರ್ಜ್ ಮಾಡಿದ್ದೇಗೆ ಎಂಬ ಪ್ರಶ್ನೆ ಹಾಗೆ ಉಳಿದಿದೆ. ಅಧಿಕಾರಿಗಳ ವಿರುದ್ಧ ಇತರೆ ಕೆಲಸಗಾರರು ಆಕ್ರೋಶ ಹೊರ ಹಾಕಿದ್ದಾರೆ. ಗಾಯಗೊಂಡ ಪವರ್ ಮ್ಯಾನ್ ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವಾಸು ಅವರಿಗೆ ಚಿಕಿತ್ಸೆ ನೀಡಲಾಗುತ್ತಿವೆ.

ಬ್ಯಾಕೋಡು ಮೆಸ್ಕಾಂ ಆಫೀಸ್ ಗೆ ತೆರಳಿ ಅಧಿಕಾರಿಗಳಿಗೆ ಸ್ಥಳೀಯ‌ಕಾರ್ಮಿಕರು ತರಾಟೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/17251

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close