ಗೋಮಾಂಸದ ಹೋಟೆಲ್ ನ ಮೇಲೆ ಒಂದೂವರೆ ತಿಂಗಳಲ್ಲಿ ಎರಡು ಬಾರಿ ರೈಡ್-ಉಪವಿಭಾಗಾಧಿಕಾರಿಗಳ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಗೋ ಹತ್ಯೆ ಮತ್ತು ಗೋಮಾಂಸದ ವ್ಯಾಪಾರ ಮುಂದುವರೆದಿದೆ. ಒಂದೇ ದಿನ ಭದ್ರಾವತಿಯಲ್ಲಿ ಎರಡು ಗೋ ಮಾಂಸದ ಹೋಟೆಲ್ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಹಿಂದೆ ಭದ್ರಾವತಿಯ ಕೆಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಬಳಿಯ ನಗರಸಭೆ ಮಳಿಗೆಯ ಹೋಟೆಲ್ ವೊಂದರಲ್ಲೇ ಗೋಮಾಂಸ‌ ಮಾರಾಟ ಮಾಡಲಾಗುತ್ತಿತ್ತು. ಏ.14 ಪೊಲೀಸರ ದಾಳಿ ನಡೆಸಿದ್ದರು. ಹೋಟೆಲ್ ನ್ನ ಸೀಜ್ ಮಾಡಲಾಗಿತ್ತು. ಒಂದುವರೆ ತಿಂಗಳ ನಂತರ ಮತ್ತೆ ಆ ಹೋಟೆಲ್ ತನ್ನ ಅಕ್ರಮ ಗೋಮಾಂಸದಲ್ಲಿ ತೊಡಗಿ ಮತ್ತೊಮ್ಮೆ ದಾಳಿಗೆ ಒಳಗಾಗಿದೆ.

ಈ ವಿಚಾರದಲ್ಲಿ ಹಿಂದೂ ಸಂಘಟನೆಗಳು ಆಕ್ರೋಶ ಮುಂದುವರೆದಿದ್ದು, ಗೋಹತ್ಯೆ ವಿಚಾರದಲ್ಲಿ ಉಪವಿಭಾಗಾಧಿಕಾರಿಗಳ ಕಾರ್ಯ ವೈಖರಿಯನ್ನೇ ಪ್ರಶ್ನಿಸುವಂತಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿವೆ. ಗೋಮಾಂಸ ನಿಷೇಧ ಕಾನೂನು ಜಾರಿಯಿದ್ದರೂ ಅಧಿಕಾರಿಗಳು ಕಾನೂನಿನ ಪ್ರಕಾರ ನಡೆದುಕೊಂಡಿಲ್ಲವೆಂದು ದೂರಲಾಗಿದೆ.

ಭದ್ರಾವತಿ ಹೊಸ್ಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆ ಹೊನ್ನೂರ್ ಸರ್ಕಲ್ ನ ಹೋಟೇಲನ ಮೇಲೆ ದಾಳಿ ನಡೆಸಿ ಗೋ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16003

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close