ಅಕ್ರಮ ಮದ್ಯ ಮಾರಾಟದ ವಿರುದ್ಧ ನಡೆದ ಪ್ರತಿಭಟನೆ-ಸುಮೋಟೊ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಬೇಡರ ಹೊಸಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಜೂ.3 ರಂದು ನಡೆದಿದ್ದ ಮಹಿಳೆಯರ ದಿಡೀರ್ ರಸ್ತೆ ತಡೆ ಬಗ್ಗೆ ಸುಮೋಟೋ ಪ್ರಕರಣ ದಾಖಲಾಗಿದೆ.

ಜೂ.03 ರಂದು ಬೇಡರಹೊಸಳ್ಳಿ ಗ್ರಾಮದಲ್ಲಿ ಗ್ರಾಮದ ಕೆಲವರು ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ದೂರು ಕಂಟ್ರೋಲ್ ರೂಂಗೆ ಬಂದ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಬೇಡರಹೊಸಳ್ಳಿ ಗ್ರಾಮದ ಸರ್ಕಲ್ ಬಳಿ ಶಿವಮೊಗ್ಗ ಹೊನ್ನಾಳಿ ರಾಜ್ಯ ಹೆದ್ದಾರಿ-25 ರಸ್ತೆಯನ್ನು ಬೇಡರ ಹೊಸಳ್ಳಿ, ಗ್ರಾಮದ ವಾಸಿಗಳಾದ ಸುಮಾರು 20-25 ಜನರು ಸೇರಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ಹಾಗು ವಾಹನಗಳಿಗೆ ಆಡೆ ತಡೆಗಳನ್ನ ಉಂಟು ಮಾಡಿದ್ದರು.

ಆಗ ರಸ್ತೆ ತಡೆ ಮಾಡಿದವರಿಗೆ ಈ ರೀತಿ ರಸ್ತೆ ತಡೆಯನ್ನು ಮಾಡಿದರೆ ಸಾರ್ವಜನಿಕರಿಗೆ, ಶಾಲಾ ವಾಹನಗಳಿಗೆ, ಆಂಬುಲೆನ್ಸ್ ಗೆ, ಸರ್ಕಾರಿ ಬಸ್ ಗಳಿಗೆ ತೊಂದರೆ ಉಂಟಾಗುತ್ತದೆ ನಿಮ್ಮಲ್ಲಿ ಏನಾದರೂ ಸಮಸ್ಯೆ ಇದ್ದರೆ ಠಾಣೆಗೆ ಹೋಗಿ ದೂರು ನೀಡಿ ಎಂದು ಪೊಲೀಸರು ಸೂಚನೆ ನೀಡಿದರು ರಸ್ತೆ ತಡೆಯನ್ನ ಮುಂದುವರೆಸಲಾಗಿತ್ತು.‌

ಎಷ್ಟೇ ಹೇಳಿದರೂ ಪೊಲೀಸರ ಮಾತನ್ನು ಕೇಳದೇ ರಸ್ತೆ ತಡೆಯನ್ನು ಮುಂದುವರೆಸಿದ್ದರಿಂದ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐಗೆ ತಿಳಿಸಿದ ಮೇರೆಗೆ ಪಿಐ ಅವರು ಹೆಚ್ಚಿನ ಸಿಬ್ಬಂದಿಗಳ ಜೊತೆ ಬಂದಿದ್ದರು. ರಸ್ತೆ ತಡೆಯನ್ನು ಮಾಡುತ್ತಿದ್ದ ಜನರಿಗೆ ಮನವರಿಕೆ ಮಾಡಿ ರಸ್ತೆ ತಡೆಯನ್ನು ತೆರವುಗೊಳಿಸುವಂತೆ ಹೇಳಿ ನಂತರ ಪ್ರತಿಭಟನೆ ಸ್ಥಗಿತಗೊಂಡಿತ್ತು.

ನಂತರ ಅಕ್ರಮ ಕೂಟ ಕಟ್ಟಿಕೊಂಡು ಸುಮಾರು ಒಂದು ಗಂಟೆಯ ಕಾಲ ರಸ್ತೆ ತಡೆ ಮಾಡಿ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿದ 1) ಧನಲಕ್ಷ್ಮಿ, 2) ಪಚ್ಚಮ್ಮ, 3) ಅಂಚಲಿ, 4)ಗಂಗಮ್ಮ, 5)ರತ್ನಮ್ಮ, 6).ದೀಪಾ 7), ಅಂಬಿಕಾ, 8)ಜಗದೀಶ, 9) ಕಾರ್ತಿಕ, 10) ಅಭಿಷೇಕ, 11)ಮಂಜುನಾಥ, 12)ಸಂಜಯ್, 13)ರಾಜೇಶ ಹಾಗು ಇತರ ವಿರುದ್ಧ ಸುಮೋಟೋ ದಾಖಲಾಗಿದೆ.‌

ಇದನ್ನೂ ಓದಿ-https://suddilive.in/archives/16436

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close