ಸುದ್ದಿಲೈವ್/ಶಿವಮೊಗ್ಗ
ಸೂಳೆಬೈಲು-ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಪ್ರತೀದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಇಲ್ಲಿ ದಿನನಿತ್ಯವೂ ಅಪಘಾತ ಸಂಭವಿಸುತ್ತಿದ್ದು ರಸ್ತೆ ಅಪಘಾತಗಳತಡೆಗೆ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸೂಳೆಬೈಲಿನಲ್ಲಿ ಸಾವಿರಾರು ಮನೆಗಳಿದ್ದೂ ಸೂಳೆಬೈಲಿನ ರಸ್ತೆ ಮತ್ತೂರು, ಕಡೆಕಲ್, ಹಾಳ್ ಲಕ್ಕವಳ್ಳಿ ಮತ್ತು ಯಡೇಳ್ಳಿಗಳಿಗೆ ಸಂಪರ್ಕಿಸುತ್ತದೆ. ಪ್ರತೀನಿತ್ಯ ಸದರಿ ಪ್ರದೇಶದ ಜನರು ಕೆಲಸಕ್ಕೆ ಶಿವಮೊಗ್ಗಕ್ಕೆ ಹಾಗೂ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಈ ರಸ್ತೆ ಮುಖಾಂತರ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಸಲಾಗುತ್ತಿದೆ.
ಈ ಕ್ರಾಸ್ ಬಳಿ ಮಾದಾರಿ ಪಾಳ್ಯ ರಸ್ತೆ ಇದ್ದು ಹಾಗೂ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಯಾದ ನಂತರ ಪ್ರತೀನಿತ್ಯ ಅಪಘಾತಗಳು ಸರ್ವೆಸಾಮಾನ್ಯ ವಾಗಿರುತ್ತದೆ. ಜೂ. 23 ರಂದು ಅಪಘಾತವಾಗಿದ್ದು ಓರ್ವ ಜೀವಹಾನಿ ಯಾಗಿರುತ್ತದೆ.
ಸದರಿ ಸೂಳೆಬೈಲು ಬೈಪಾಸ್ ರಸ್ತೆಯಲ್ಲಿ ಅಪಘಾತಗಳನ್ನು ತಡೆಯಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುತ್ತಾರೆ. ಸದರಿ ರಸ್ತೆಯಲ್ಲಿ ಅಪಘಾತಗಳಾಗುತ್ತಿರುವ ಮಾಹಿತಿ ಶಿವಮೊಗ್ಗ ನಗರದ ಟಾಫಿಕ್ ಠಾಣೆಗೆ ಇದ್ದರೂ ಈವರೆಗೂ ಠಾಣೆಯಿಂದಾಗಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ್ದರಿಂದ ಈ ಕೂಡಲೆ ಜಿಲ್ಲಾಡಳಿತ ಸೂಳೆಬೈಲು ಬೈಪಾಸ್ ರಸ್ತೆಯಲ್ಲಿ ಅಪಘಾತಗಳನ್ನು ತಡೆಯಲು ಈ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಅಬ್ದುಲ್ ರಹೀಂ, ಸನಾವುಲ್ಲಾ, ಇಮ್ರಾನ್, ನ್ಯಾಮತ್, ಮುಜ್ಜು ಹಾಗೂ ಸೂಳೆಬೈಲು ನಿವಾಸಗಳು ಹಾಜಿರಿದ್ದರು.
ಇದನ್ನೂ ಓದಿ-https://suddilive.in/archives/17901