ವಿದ್ಯುತ್ ಶಾಕ್ ಗೆ ಕಾರ್ಮಿಕರು ಗಂಭೀರ ಗಾಯ

ಸುದ್ದಿಲೈವ್/ಶಿವಮೊಗ್ಗ

ಕಟ್ಟಡದಲ್ಲಿ ಶೀಟ್ ಹಾಕಲು ಸಾರ್ವೆ ಹಾಕುವಾಗ ವಿದ್ಯುತ್ ಲೈನ್ ತಗುಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇನ್ನೊಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಾಶೀಪುರದದಲ್ಲಿ ನೂತನ ಕಟ್ಟಡ ನಿರ್ಮಾಣದ ವೇಳೆ ಶೀಟು ಹಾಕಲು ಮುಂದಾಗಿದ್ದ ಗಣೇಶ್ (26) ಮತ್ತು ರಾಜು (32) ಯುವಕರು ಸಾರ್ವೆ ಹಾಕುವಾಗ ಹೈಟೆನ್ಷನ್ ವಯರ್ ತಗುಲಿದೆ.

ಗಣೇಶ್ ಮತ್ತು ರಾಜುವಿಗೆ ಗಂಭೀರ ಗಾಯಗಳಾಗಿವೆ. ಗಣೇಶ್ ಗೆ ತಲೆಗೆ ಹೊಡೆದಿದೆ. ರಾಜುವಿಗೆ ಎಡಗೈಗೆ ಹೊಡೆದಿದೆ. ರಾಜು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಗಣೇಶ್ ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಣೇಶ್ ಗೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗುವಿದೆ.‌ ರಾಜೂ ಚಳೂರಿನ ದೋಡ್ಡೇರಿ ಹುಡುಗನಾಗಿದ್ದಾನೆ. ಕಟ್ಟಡ ಮಾಲೀಕರು ಮತ್ತು ಮೇಸ್ತ್ರಿ ವಿರುದ್ಧ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಇದೇ ರೀತಿ ಕೋಟೆ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಹರೀಶ್ ಎಂಬ ಯುವಕ ವಿದ್ಯುತ್ ಶಾಕ್ ಗೆ ಬಲಿಯಾಗಿದ್ದ.

ಈ ಘಟನೆ ನಡೆದು ಒಂದು ವಾರ ಕಳೆಯುವದರೊಳಗೆ ಮತ್ತೊಂದು ಘಟನೆ ನಡೆದಿದೆ. ಕಾರ್ಮಿಕ ಇಲಾಖೆ ಕಾರ್ಮಿಕರ ಸುರಕ್ಷತೆ ಬಗ್ಗೆ ಒತ್ತು ನೀಡುವಂತೆ ಕುಟುಂಬ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/17737

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close