ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಪ್ರತಿಷ್ಠಿತ ಹೋಟೆಲ್ ವೊಂದರ ಹೆಡ್ ಕುಕ್ ಓರ್ವ ನೇಣುಬಿಗಿದ ಸ್ಥಿಯಲ್ಲಿ ಪತ್ತೆಯಾಗಿದ್ದಾನೆ. ಈತನ ಸಾವಿಗೆ ಕಾರಣವೇನೆಂಬುದನ್ನ ಜಯನಗರ ಪೊಲೀಸರು ಪತ್ತೆಹಚ್ಚಬೇಕಿದೆ.
ಶಿವಮೊಗ್ಗದ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಹೆಡ್ ಕುಕ್ ಆಗಿರುವ ರಾಜೇಶ್ ಬಿನ್ ವೆಂಕಟೇಶ್ (27) ಸಾವನ್ನಪ್ಪಿರುವ ದುರ್ದೈವಿ. ನಗರದ ರವೀಂದ್ರ ನಗರದಲ್ಲಿ ರೂಂನಲ್ಲಿದ್ದ ರಾಜೇಶ್ ಇಂದು ಬೆಳಿಗ್ಗೆ ಹೋಟೆಲ್ ಕೆಲಸಕ್ಕೆ ತೆರಳುವ ವೇಳೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಸವಳಂಗ ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ಹೆಡ್ ಕುಕ್ ಆಗಿದ್ದ ರಾಕೇಶ್ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನವರಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ. ಶವವನ್ನ ಮೆಗ್ಗಾನ್ ಶವಗಾರಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ-https://suddilive.in/archives/16687
Tags:
ಕ್ರೈಂ ನ್ಯೂಸ್