ಸುದ್ದಿಲೈವ್/ಶಿವಮೊಗ್ಗ
ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಪರಿಹಾರ ನೀಡಿದ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಸ್ವಾಮಿ ವಿವೇಕಾನಂದ ಬಡಾವಣೆಯ ಬಿ ಬ್ಲಾಕ್ ನಿವಾಸಿಗಳು ಧನ್ಯವಾದಗಳನ್ನ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದ ಬಡಾವಣೆಯ ಸ್ನೇಹ ಅಪಾರ್ಟ್ಮೆಂಟ್ ಪಕ್ಕದ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಚಾಚಿಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಮರ ಅಡ್ಡ ಬಂದರೆ ಬುಡಸಮೇತ ಕಿತ್ತುಹಾಕುವ ಅಧಿಕಾರಿಗಳ ನಡುವೆ ಪಾಲಿಕೆಯ ದಕ್ಷ ಅಧಿಕಾರಿ ಹಾಗೂ ಆಯುಕ್ತರಾದ ಮಾಯಣ್ಣ ಗೌಡ ಮತ್ತು ಕೃಷ್ಣಮೂರ್ತಿಗಳು ಸಂಯಮ ಮೆರೆದಿದ್ದಾರೆ.
ಅಲ್ಲದೆ ನಿನ್ನೆ ಸರಕು ಸಾಗಾಣಿಕೆಯ ಲಾರಿಯೊಂದು ಮರದ ಬಳಿ ಹಾದು ಹೋಗುವಾಗ ರೆಂಬೆಗಳು ಲಾರಿಗೆ ತಗುಲಿ ಸಂಪೂರ್ಣ ನೆಲಕ್ಕೆ ಚಾಚುವಂತೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿ ಜೋತಾಡುತ್ತಿದ್ದವು. ಇದರಿಂದಾಗಿ ಬೈಕು, ಕಾರು ಮತ್ತು ಸಾರ್ವಜನಿಕರು ಸಂಚಾರ ಮಾಡಲು ಸಮಸ್ಯೆ ಉಂಟಾಗಿತ್ತು
ಈ ಹಿನ್ನೆಲೆಯಲ್ಲಿ ತಕ್ಷಣವೇ ವಾರ್ಡ್ ನ ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿಯವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡಿದ್ದ ಮರದ ರೆಂಬೆಗಳನ್ನು ತೆರೆವುಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಗಳ ಸಕಾಲಿಕ ಸಹಕಾರಕ್ಕೆ ಧನ್ಯವಾದಗಳನ್ನ ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/17202