ಸುದ್ದಿಲೈವ್/ಶಿವಮೊಗ್ಗ
ರಾಮಣ್ಣ ಶ್ರೇಷ್ಣೀ ಪಾರ್ಕ್ ಬಳಿ 65 ವರ್ಷದ ವೃದ್ಧೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಾರೋಗ್ಯದ ಹಿನ್ನಲೆಯಲ್ಲಿ ವೃದ್ಧೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬರುತ್ತಿದೆ. ವಿಜಯ (65) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿರುವುದಾಗಿ ತಿಳಿದು ಬಂದಿದೆ.
ನಿನ್ನೆ ಸಂಜೆ ಮನೆಯಲ್ಲಿ ಮಹಡಿ ಮೇಲೆ ಹೋಗಲು ಇರುವ ಕಬ್ಬಿಣದ ಮೆಟ್ಟಿಲಿಗೆ ಸೀರೆ ಬಿಗಿದುಕೊಂಡು ಮಹಿಳೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನ ಮರಣೋತ್ತರ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/17372
Tags:
ಕ್ರೈಂ ನ್ಯೂಸ್