ತಿನಿಸು ಅಂಗಳದ ಅಂಗಡಿಗಳ ಮೇಲೆ ಫುಡ್ ಸೇಫ್ಟಿ ಆಫೀಸರ್ ದಾಳಿ

ಸುದ್ದಿಲೈವ್/ಶಿವಮೊಗ್ಗ

ಮಾಂಸಹಾರಿ ಫುಡ್ ಕೋರ್ಟ್ ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು(ಫುಡ್ ಸೇಫ್ಟಿ) ದಾಳಿ ನಡೆಸಿದ್ದಾರೆ. 15 ತಿನಿಸು ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ.

ದಾಳಿಯ ವೇಳೆ ಆಹರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ. ಎಲ್ಲಾ ಅಂಗಡಿಗಳು ಪರವಾನಗಿ ಇಲ್ಲದೆ ನಡೆಯುತ್ತಿರುವುದು, ಅಲ್ಲಿನ ಸಿಬ್ಬಂದಿಗಳ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು.

ಆರ್ ಒ ವಾಟರ್ ಅಳವಡಿಸದೆ ಇರುವುದು, ಐಎಸ್ಐ ಪ್ರಾಮಾಣಿಕರಿಸಿದ ಬಣ್ಣಗಳನ್ನ ಬಳಸುತ್ತಿರುವುದು. ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಸುಮಾರು 15 ಅಂಗಡಿಗಳಿಗೆ ನೋಟೀಸ್ ನೀಡಿದ್ದಾರೆ. ಗ್ರಾಹಕರ ಹಿತದೃಷ್ಠಿಯಿಂದ ಫುಡ್ ಸೇಫ್ಟಿ ಅಧಿಕಾರಿಗಳ ದಾಳಿ ಇನ್ನೂ ಹೆಚ್ಚಾಗ ಬೇಕಿದೆ.

ಐಎಸ್ಐ ಮಾರ್ಕಿನ ಕಲರ್ ಗಳನ್ನ ಬಳಸಲು ಅವಕಾಶವಿದ್ದರೂ, ಐಎಸ್ಐ ಮಾರ್ಕ್ ಇಲ್ಲದ ಬಣ್ಣಗಳನ್ನ ಅಂಗಡಿ ಮಾಲೀಕರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ. ಆಹಾರವನ್ನೂ ಸುರಕ್ಷತೆಗೆ ನೀಡದ ಇಂತಹ ಅಂಗಡಿಯವರ ವಿರುದ್ಧ ಹೆಚ್ಚಿನ ದಾಳಿ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಬಯಸಿದ್ದಾರೆ.

ಇದನ್ನೂ ಓದಿ-https://suddilive.in/archives/17160

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close