ನಾಳೆ ಭದ್ರಾವತಿಗೆ ಹೆಚ್ ಡಿಕೆ

ಸುದ್ದಿಲೈವ್/ಶಿವಮೊಗ್ಗ

ನಾಳೆ ಕೇಂದ್ರ ಬೃಹತ್ ಕೈಗಾರಿಗೆ ಮತ್ತು ಉಕ್ಕು ಸಚಿವ ಹೆಚ್ ಡಿ.ಕುಮಾರ ಸ್ವಾಮಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಬೇಟಿ ನೀಡಲಿದ್ದಾರೆ. ಸಚಿವರಾಗಿ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸುತ್ತಿದ್ದಾರೆ.

ಬೆಳಗ್ಗೆ 7 ಗಂಟೆಗೆ ದೆಹಲಿ ಬಿಡುವ ಸಚಿವ ಕುಮಾರ ಸ್ವಾಮಿ ಅವರು ಮಧ್ಯಾಹ್ನ 12-15 ಕ್ಕೆ ಶಿವಮೊಗ್ಗ ಏರ್ ಪೋರ್ಟ್ ತಲುಪಲಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್ ನಿಂದ ಭದ್ರಾವತಿ ವಿಐಎಸ್ ಎಲ್ ಗೆ ವಾಹನದಲ್ಲಿ ತೆರಳಲಿದ್ದಾರೆ.

ಮಧ್ಯಾಹ್ನ 1-30 ರಿಂದ 4 ಗಂಟೆಯ ವರೆಗೆ ವಿಐಎಸ್ ಎಲ್ ಪ್ಲಾಂಟ್ ಗೆ ಭೇಟಿ, ವಿಐಎಸ್ ಎಲ್ ಕಾರ್ಮಿಕರ ಭೇಟಿ, ಅಧಿಕಾರಿಗಳ ಜೊತೆ ರಿವಿವ್ಯೂ ಮೀಟಿಂಗ್ ನಡೆಸಲಿದ್ದಾರೆ. 5 ಗಂಟೆಗೆ ಕಾರ್ಖಾನೆಯಿಂದ ಶಿವಮೊಗ್ಗ ಏರ್ ಪೋರ್ಟ್ ಗೆ ಬರಲಿದ್ದು, ಸಂಜೆ 5-15 ಕ್ಕೆ ಸಚಿವರು ಬೆಂಗಳೂರು ಕಡೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ.

ನೂತನ ಕೇಂದ್ರ ಸರ್ಕಾರ ರಚನೆಯಾಗಿ 20 ದಿನಗಳಲ್ಲಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಆಗಮಿಸುತ್ತಿದ್ದು ಕಾರ್ಖಾನೆ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತಿರುವುದು ಭದ್ರಾವತಿ ಜನರಿಗೆ ಖುಷಿ ತಂದಿದೆ.

ಇದನ್ನೂ ಓದಿ-https://suddilive.in/archives/18067

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close