ಸುದ್ದಿಲೈವ್/ಶಿವಮೊಗ್ಗ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಬಂಧನದ ಭೀತಿ ಉಂಟಾಗಿದ್ದರೆ, ಮಗ ನೂತನ ಸಂಸದರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇಂದು ಸಂಜೆ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ನೂತನ ಎಂಎಲ್ ಸಿ ಯಾಗಿ ಚುನಾಯಿತರಾದ ಡಾ.ಧನಂಜಯ ಸರ್ಜಿ, ಭೋಜೇಗೌಡ, ಸಂಸದರಾಗಿ ಆಯ್ಕೆಯಾಗಿರುವ ಮತ್ತು ಬಿ.ಎಸ್.ಯಡಿಯೂರಪ್ಲನವರ ಪುತ್ರ ರಾಘವೇಂದ್ರರಿಗೆ ಅಭಿನಂದನೆ ಮತ್ತು ಕೃತಜ್ಞತಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಬಿಎಸ್ ವೈರಿಗೆ ಬಂಧನದ ಭೀತಿಯಿಂದ ಎಲ್ಲಿ ಹೋಗಿದ್ದಾರೆ ಎಂಬುದನ್ನ ಅತ್ತ ಪೊಲೀಸರು ಹುಡುಕುತ್ತಿದ್ದರೆ, ಇತ್ತ ಅವರ ಪುತ್ರ ರಾಘವೇಂದ್ರ ಕಾರ್ಯಕ್ರಮದಲ್ಲಿ ಖುಷಿಯಾಗಿ ಪಾಲ್ಗೊಂಡಿದ್ದಾರೆ.
Tags:
ರಾಜಕೀಯ ಸುದ್ದಿಗಳು